ಜನ ಮನದ ನಾಡಿ ಮಿಡಿತ

Advertisement

ಎಸ್.ಪಿ. ಸೂಚನೆ ಹಿನ್ನಲೆ: ಕಡಬದಲ್ಲಿ ರಾತ್ರಿ ವೇಳೆ ಸಂಘಟನೆಗಳ ಪ್ರಮುಖರ ಮನೆಗೆ ಪೋಲಿಸರ ಭೇಟಿ

ಕಡಬ: ದ.ಕ. ಜಿಲ್ಲೆಗೆ ನೂತನ ಎಸ್.ಪಿ. ಯಾಗಿ ಡಾ. ಅರುಣ್ ಕೆ. ಅವರು ಆಗಮಿಸಿದ್ದು, ಅವರು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈಗಾಗಲೇ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಅಪರಾದ ಪ್ರಕರಣಗಳ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಿದ್ದಾರೆ. ಇವರ ಸೂಚನೆ ಮೇರೆಗೆ ಜಿಲ್ಲೆಯ ಎಲ್ಲಾ ಠಾಣೆಗಳಲ್ಲಿ ಇದೀಗ ಪೋಲಿಸರು ಅಲರ್ಟ್ ಆಗಿದ್ದಾರೆ. ಈ ಮಧ್ಯೆ ಮೇ.೩೦ ಹಾಗೂ ಮೇ.೩೧ರಂದು ಹಾಗೂ ಜೂ.೧ರಂದು ರಾತ್ರಿ ವೇಳೆ ಕಡಬ ಎಸ್.ಐ. ಹಾಗೂ ಸಿಬ್ಬಂದಿಗಳು ಸಂಘಟನೆಯಲ್ಲಿ ಗುರುತಿಸಿಕೊಂಡಿರುವವರ ಮನೆಗೆ ತೆರಳಿ ಜಿ.ಪಿ.ಎಸ್. ಪೋಟೋ ಹಾಗೂ ಅವರನ್ನು ವಿಚಾರಿಸಿಕೊಂಡು ಹೋಗುತ್ತಿದ್ದು ಈ ಮದ್ಯೆ ಜೂ.೧ರ ರಾತ್ರಿ ಸುಮಾರು ೧೧ ಗಂಟೆಯ ವೇಳೆಗೆ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಹತ್ತು ಹದಿನೈದು ಮಂದಿ ಕಡಬ ಪೋಲಿಸ್ ಠಾಣೆಗೆ ಆಗಮಿಸಿ, ನಮ್ಮನ್ನು ಹುಡುಕಿಕೊಂಡು ನೀವು ಮನೆಗೆ ಬರುವುದು ಬೇಡ, ನಾವೇ ಠಾಣೆಗೆ ಬಂದಿದ್ದೇವೆ, ಎಷ್ಟು ಬೇಕಾದರೂ ಫೋಟೋ ತೆಗೆದುಕೊಳ್ಳಿ, ಯಾವ ರೀತಿಯ ತನಿಖೆ ಬೇಕಾದರೂ ಮಾಡಿ ಎಂದು ಹೇಳಿ ಠಾಣೆಯಲ್ಲಿ ಎದುರಲ್ಲಿ ಕುಳಿತುಕೊಂಡ ಘಟನೆ ನಡೆದಿದೆ. ವಿ.ಹಿಂ.ಪ. ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಪ್ರಮೋದ್ ನಂದುಗುರಿ, ಪ್ರಮುಖರಾದ ದೇವಿಪ್ರಸಾದ್ ಮರ್ದಾಳ, ಉಮೇಶ್ ಶೆಟ್ಟಿ ಸಾಯಿರಾಂ, ಮೋಹನ ಕೆರೆಕೋಡಿ ಸೇರಿದಂತೆ ಸುಮಾರು ೧೫ ಮಂದಿ ಆಗಮಿಸಿದ್ದು, ಈ ಸಂದರ್ಭದಲ್ಲಿ ಎಸ್.ಐ, ಅಭಿನಂದನ್ ಅವರು ನಾವು ಮೇಲಾಧಿಕಾರಿಗಳ ಆದೇಶ ಪಾಲಿಸುತ್ತಿದ್ದೇವೆ. ನಿಮ್ಮ ಬೇಡಿಕೆಗಳು ಇದ್ದರೆ ತಿಳಿಸಿ ನಾವು ಮೇಲಾಧಿಕಾರಿಗಳಿಗೆ ತಿಳಿಸುತ್ತೇವೆ, ಇವಾಗ ಇಲ್ಲಿಂದ ಹೋಗಿ ಎಂದರು. ಇದಕ್ಕೆ ಪ್ರಾರಂಭದಲ್ಲಿ ಒಪ್ಪದ ಪ್ರಮುಖರು ನಾವು ಬೆಳಿಗ್ಗೆಯವರೆಗೆ ಠಾಣೆಯಲ್ಲೆ ಇರುತ್ತೇವೆ, ನೀವು ನಾಳೆ ರಾತ್ರಿ ಕೂಡ ನಮ್ಮನ್ನು ಹುಡುಕಿಕೊಂಡು ಬರುತ್ತಿರಲ್ವ, ಮನೆಗೆ ಬಂದಾಗ ಸಹಜವಾಗಿ ಮನೆಯವರಿಗೂ ತೊಂದರೆ ಆಗುತ್ತದೆ, ನಾವು ಏನು ತಪ್ಪು ಮಾಡಿದ್ದೇವೆ, ನಮ್ಮನ್ನು ರೌಡಿಗಳಂತೆ ನೋಡುತ್ತಿರಲ್ಲವೇ, ನಾಳೆ ನಮ್ಮನ್ನು ಹುಡುಕಿಕೊಂಡು ಪುನಃ ಬರುವುದಿಲ್ಲ ಆದರೆ ನಾವು ತೆರಳುತ್ತೇವೆ ಎಂದು ಹೇಳಿದರು. ಇದಕ್ಕೆ ಎಸ್.ಐ.ಯವರು ಉತ್ತರಿಸಿ ನಾವು ಮೇಲಾಧಿಕಾರಿಗಳ ಆದೇಶ ಪಾಲಿಸುತ್ತೇವೆ ಬಿಟ್ಟರೆ ಬೇರೆ ಏನೂ ಭರವಸೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು. ಬಳಿಕ ೧೨ ಗಂಟೆ ಸುಮಾರಿಗೆ ಕಾರ್ಯಕರ್ತರು ಠಾಣೆಯಿಂದ ತೆರಳಿದ್ದು ನಾಳೆ ಕುಟುಂಬ ಸಮೇತರಾಗಿ ಠಾಣೆಯಲ್ಲಿ ಕುಳಿತುಕೊಳ್ಳುತ್ತೇವೆ, ಆದೇಶ ಮಾಡಿದ ಎಸ್. ಪಿ.ಯವರಿಗೆ ತಿಳಿಸಿ ಎಂದು ಹೇಳಿ ತೆರಳಿದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಮುಖ ಜಯಂತರವರು, ನಾಳೆ ಈ ಬಗ್ಗೆ ಚಿಂತನೆ ನಡೆಸುತ್ತೇವೆ. ಹಿಂದೂ ಕಾರ್ಯಕರ್ತರ ಮನೋಸ್ಥೆöÊರ್ಯ ಕಸಿಯುವ ಇಲಾಖೆಯ ಪ್ರಯತ್ನ ಫಲ ನೀಡದು, ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಸರಕಾರದ ವಿರುದ್ದ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.

ಕೆಲವು ಕಾರ್ಯಕರ್ತರನ್ನು ಜಂಕ್ಷನ್‌ಗೆ ಕರೆಯುತ್ತಾರೆ
ಮೂರು ದಿನಗಳಿಂದ ದಿನಂಪ್ರತಿ ರಾತ್ರಿ ಮನೆಗೆ ಬರುವ ಪೋಲಿಸರು ಇದೀಗ ಸಮೀಪದ ಜಂಕ್ಷನ್‌ಗೆ ಕರೆಯುತ್ತಾರೆ, ನಾವು ಮನೆಯಿಂದ ಯಾವ ನಂಬಿಕೆಯಲ್ಲಿ ಬರಬೇಕು, ನಮ್ಮನ್ನು ಪೋಲಿಸರೇ ಕರೆದರೇ ಅಥವ ಇನ್ಯಾರೋ ಕರೆ ಮಾಡಿದ್ದಾರೆಯೇ ಎಂದು ನಮಗೆ ತಿಳಿಯುವುದಿಲ್ಲ, ಕಡಬ ತನಿಖಾ ಎಸ್.ಐ. ಅಕ್ಷಯ್ ರವರು ಕೇವಲ ಫೋಟೋ ತೆಗೆಯುವುದನ್ನು ಬಿಟ್ಟು ಉಢಾಫೆಯಾಗಿ ಮಾತನಾಡುತ್ತಾರೆ, ಈ ರೀತಿಯಾದರೆ ಮುಂದೆ ಯಾವ ರೀತಿ ಇರಬಹುದು, ಇದಕ್ಕಾಗಿ ಮನೆಯಲ್ಲಿ ನೀವು ಸ್ಟೇಷನ್ ನಲ್ಲಿಯೇ ಕುಳಿತುಕೊಳ್ಳಿ ಎಂದು ಕಳಿಸಿದ್ದಾರೆ ಎಂದು ಜಯಂತ್ ರವರು ಹೇಳಿದರು.

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

error: Content is protected !!