ಕಡಬ: ದ.ಕ. ಜಿಲ್ಲೆಗೆ ನೂತನ ಎಸ್.ಪಿ. ಯಾಗಿ ಡಾ. ಅರುಣ್ ಕೆ. ಅವರು ಆಗಮಿಸಿದ್ದು, ಅವರು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈಗಾಗಲೇ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಅಪರಾದ ಪ್ರಕರಣಗಳ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಿದ್ದಾರೆ. ಇವರ ಸೂಚನೆ ಮೇರೆಗೆ ಜಿಲ್ಲೆಯ ಎಲ್ಲಾ ಠಾಣೆಗಳಲ್ಲಿ ಇದೀಗ ಪೋಲಿಸರು ಅಲರ್ಟ್ ಆಗಿದ್ದಾರೆ. ಈ ಮಧ್ಯೆ ಮೇ.೩೦ ಹಾಗೂ ಮೇ.೩೧ರಂದು ಹಾಗೂ ಜೂ.೧ರಂದು ರಾತ್ರಿ ವೇಳೆ ಕಡಬ ಎಸ್.ಐ. ಹಾಗೂ ಸಿಬ್ಬಂದಿಗಳು ಸಂಘಟನೆಯಲ್ಲಿ ಗುರುತಿಸಿಕೊಂಡಿರುವವರ ಮನೆಗೆ ತೆರಳಿ ಜಿ.ಪಿ.ಎಸ್. ಪೋಟೋ ಹಾಗೂ ಅವರನ್ನು ವಿಚಾರಿಸಿಕೊಂಡು ಹೋಗುತ್ತಿದ್ದು ಈ ಮದ್ಯೆ ಜೂ.೧ರ ರಾತ್ರಿ ಸುಮಾರು ೧೧ ಗಂಟೆಯ ವೇಳೆಗೆ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಹತ್ತು ಹದಿನೈದು ಮಂದಿ ಕಡಬ ಪೋಲಿಸ್ ಠಾಣೆಗೆ ಆಗಮಿಸಿ, ನಮ್ಮನ್ನು ಹುಡುಕಿಕೊಂಡು ನೀವು ಮನೆಗೆ ಬರುವುದು ಬೇಡ, ನಾವೇ ಠಾಣೆಗೆ ಬಂದಿದ್ದೇವೆ, ಎಷ್ಟು ಬೇಕಾದರೂ ಫೋಟೋ ತೆಗೆದುಕೊಳ್ಳಿ, ಯಾವ ರೀತಿಯ ತನಿಖೆ ಬೇಕಾದರೂ ಮಾಡಿ ಎಂದು ಹೇಳಿ ಠಾಣೆಯಲ್ಲಿ ಎದುರಲ್ಲಿ ಕುಳಿತುಕೊಂಡ ಘಟನೆ ನಡೆದಿದೆ. ವಿ.ಹಿಂ.ಪ. ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಪ್ರಮೋದ್ ನಂದುಗುರಿ, ಪ್ರಮುಖರಾದ ದೇವಿಪ್ರಸಾದ್ ಮರ್ದಾಳ, ಉಮೇಶ್ ಶೆಟ್ಟಿ ಸಾಯಿರಾಂ, ಮೋಹನ ಕೆರೆಕೋಡಿ ಸೇರಿದಂತೆ ಸುಮಾರು ೧೫ ಮಂದಿ ಆಗಮಿಸಿದ್ದು, ಈ ಸಂದರ್ಭದಲ್ಲಿ ಎಸ್.ಐ, ಅಭಿನಂದನ್ ಅವರು ನಾವು ಮೇಲಾಧಿಕಾರಿಗಳ ಆದೇಶ ಪಾಲಿಸುತ್ತಿದ್ದೇವೆ. ನಿಮ್ಮ ಬೇಡಿಕೆಗಳು ಇದ್ದರೆ ತಿಳಿಸಿ ನಾವು ಮೇಲಾಧಿಕಾರಿಗಳಿಗೆ ತಿಳಿಸುತ್ತೇವೆ, ಇವಾಗ ಇಲ್ಲಿಂದ ಹೋಗಿ ಎಂದರು. ಇದಕ್ಕೆ ಪ್ರಾರಂಭದಲ್ಲಿ ಒಪ್ಪದ ಪ್ರಮುಖರು ನಾವು ಬೆಳಿಗ್ಗೆಯವರೆಗೆ ಠಾಣೆಯಲ್ಲೆ ಇರುತ್ತೇವೆ, ನೀವು ನಾಳೆ ರಾತ್ರಿ ಕೂಡ ನಮ್ಮನ್ನು ಹುಡುಕಿಕೊಂಡು ಬರುತ್ತಿರಲ್ವ, ಮನೆಗೆ ಬಂದಾಗ ಸಹಜವಾಗಿ ಮನೆಯವರಿಗೂ ತೊಂದರೆ ಆಗುತ್ತದೆ, ನಾವು ಏನು ತಪ್ಪು ಮಾಡಿದ್ದೇವೆ, ನಮ್ಮನ್ನು ರೌಡಿಗಳಂತೆ ನೋಡುತ್ತಿರಲ್ಲವೇ, ನಾಳೆ ನಮ್ಮನ್ನು ಹುಡುಕಿಕೊಂಡು ಪುನಃ ಬರುವುದಿಲ್ಲ ಆದರೆ ನಾವು ತೆರಳುತ್ತೇವೆ ಎಂದು ಹೇಳಿದರು. ಇದಕ್ಕೆ ಎಸ್.ಐ.ಯವರು ಉತ್ತರಿಸಿ ನಾವು ಮೇಲಾಧಿಕಾರಿಗಳ ಆದೇಶ ಪಾಲಿಸುತ್ತೇವೆ ಬಿಟ್ಟರೆ ಬೇರೆ ಏನೂ ಭರವಸೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು. ಬಳಿಕ ೧೨ ಗಂಟೆ ಸುಮಾರಿಗೆ ಕಾರ್ಯಕರ್ತರು ಠಾಣೆಯಿಂದ ತೆರಳಿದ್ದು ನಾಳೆ ಕುಟುಂಬ ಸಮೇತರಾಗಿ ಠಾಣೆಯಲ್ಲಿ ಕುಳಿತುಕೊಳ್ಳುತ್ತೇವೆ, ಆದೇಶ ಮಾಡಿದ ಎಸ್. ಪಿ.ಯವರಿಗೆ ತಿಳಿಸಿ ಎಂದು ಹೇಳಿ ತೆರಳಿದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಮುಖ ಜಯಂತರವರು, ನಾಳೆ ಈ ಬಗ್ಗೆ ಚಿಂತನೆ ನಡೆಸುತ್ತೇವೆ. ಹಿಂದೂ ಕಾರ್ಯಕರ್ತರ ಮನೋಸ್ಥೆöÊರ್ಯ ಕಸಿಯುವ ಇಲಾಖೆಯ ಪ್ರಯತ್ನ ಫಲ ನೀಡದು, ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಸರಕಾರದ ವಿರುದ್ದ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.
ಕೆಲವು ಕಾರ್ಯಕರ್ತರನ್ನು ಜಂಕ್ಷನ್‌ಗೆ ಕರೆಯುತ್ತಾರೆ
ಮೂರು ದಿನಗಳಿಂದ ದಿನಂಪ್ರತಿ ರಾತ್ರಿ ಮನೆಗೆ ಬರುವ ಪೋಲಿಸರು ಇದೀಗ ಸಮೀಪದ ಜಂಕ್ಷನ್‌ಗೆ ಕರೆಯುತ್ತಾರೆ, ನಾವು ಮನೆಯಿಂದ ಯಾವ ನಂಬಿಕೆಯಲ್ಲಿ ಬರಬೇಕು, ನಮ್ಮನ್ನು ಪೋಲಿಸರೇ ಕರೆದರೇ ಅಥವ ಇನ್ಯಾರೋ ಕರೆ ಮಾಡಿದ್ದಾರೆಯೇ ಎಂದು ನಮಗೆ ತಿಳಿಯುವುದಿಲ್ಲ, ಕಡಬ ತನಿಖಾ ಎಸ್.ಐ. ಅಕ್ಷಯ್ ರವರು ಕೇವಲ ಫೋಟೋ ತೆಗೆಯುವುದನ್ನು ಬಿಟ್ಟು ಉಢಾಫೆಯಾಗಿ ಮಾತನಾಡುತ್ತಾರೆ, ಈ ರೀತಿಯಾದರೆ ಮುಂದೆ ಯಾವ ರೀತಿ ಇರಬಹುದು, ಇದಕ್ಕಾಗಿ ಮನೆಯಲ್ಲಿ ನೀವು ಸ್ಟೇಷನ್ ನಲ್ಲಿಯೇ ಕುಳಿತುಕೊಳ್ಳಿ ಎಂದು ಕಳಿಸಿದ್ದಾರೆ ಎಂದು ಜಯಂತ್ ರವರು ಹೇಳಿದರು.
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ‍್ಯರ‍್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…
ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಪೌಜಾನ್…