ಧರ್ಮಾದರೀತವಾದ ಅಮಾಯಕ ವ್ಯಕ್ತಿಗಳ ಹತ್ಯೆಗಳು ಜಿಲ್ಲೆಯಲ್ಲಿ ಮತ್ತೆ ಆಗಿರುವಂತದ್ದು ಅತ್ಯಂತ ನೋವಿನ ಸಂಗತಿ ಮತ್ತು ಖಂಡನೀಯ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಇವರು ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ತಾಲೂಕಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೋಮುಗಲಭೆ ಕಡಿಮೆ ಆಗಿತ್ತು. ಮತ್ತೆ ಅಬ್ದುಲ್ ರಹೀಮ್ ಕೊಲೆ ಹಾಗೂ ಕಲಂದರ್ ಶಾಫಿ ಕೊಲೆ ಯತ್ನ ಭಯಹುಟ್ಟಿಸುವಂತದ್ದು, ಪರಿಚಯಸ್ಥರು ಪರಸ್ಪರ ಮಿತ್ರರು ಸೇರಿ ಕೊಲೆ ಮಾಡಿರುವುದು ಭವಿಷ್ಯತ್ತಿನ ದಿನಗಳಲ್ಲಿ ಜಾಗೃತೆ ಮಾಡಬೇಕಾದ ಸಂದರ್ಭಗಳು ಬಂದಿವೆ ಎಂದು ಆತಂಕವನ್ನ ವ್ಯಕ್ತಪಡಿಸಿದ್ರು.



