ಕಳೆದ 2-3 ತಿಂಗಳಿನಿಂದ ಮಧುಮೇಹ ಚುಚ್ಚುಮದ್ದು/ಔಷಧಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ದೊರಕುತ್ತಿಲ್ಲ. ಈ ಸಮಸ್ಯೆ ರಾಜ್ಯದ ಬೇರೆ ಜಿಲ್ಲೆಗಳಲ್ಲಿಯೂ ಇದ್ದಿರಬಹುದು. ಈ ದುಬಾರಿ ಬೆಲೆಯ ಚುಚ್ಚುಮದ್ದು/ಔಷಧಿ ಖರೀದಿಸಲು ಬಡವರಿಗೆ ಆಗುತ್ತಿಲ್ಲ. ಆದುದರಿಂದ ಅತಿ ತುರ್ತಾಗಿ ಎಲ್ಲಾ ಆಸ್ಪತ್ರೆಗಳಲ್ಲೂ ಮಧುಮೇಹ ಚುಚ್ಚುಮದ್ದು/ಔಷಧಿ ಸರಬರಾಜು ಮಾಡಿ ಸದಾ ಕಾಲ ಎಲ್ಲಾ ಕಡೆಗಳಲ್ಲಿ ಲಭ್ಯ ಇರುವಂತೆ ಕಟ್ಟುನಿಟ್ಟಿನ ಕ್ರಮವಹಿಸುವಂತೆ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಶೆಟ್ಟಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಗಮನಕ್ಕೆ ತಂದಿರುತ್ತಾರೆ.
ಇದಕ್ಕೆ ಉತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ಮಧುಮೇಹ ಟೈಪ್- 21ಗೆ ಇನ್ಸುಲಿನ್ ಚುಚ್ಚು ಮದ್ದುಗಳು ಪ್ರಾಥಮಿಕ ಆರೋಗ್ಯ, ಕೇಂದ್ರ ಸಮುದಾಯ ಆರೋಗ್ಯ ಕೇಂದ್ರ ತಾಲೂಕು ಆಸ್ಪತ್ರೆಗಳು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಇನ್ಸುಲಿನ್ ಚುಚ್ಚುಮದ್ದುಗಳ ಲಭ್ಯವಿರುತ್ತದೆ. ಮಧುಮೇಹ ಟೈಪ್ -1 ಗೆ ದಿನಾಂಕ: 03-12-2022 ರಂದು ನಡೆದ ಥೆರಪೇಟಿಕ್ ಕಮೀಟಿಯಲ್ಲಿ Essential dug list ನಲ್ಲಿ, 2023-24 ನೇ ಸಾಲಿನಲ್ಲಿ ಸೇರಿಸಲು ಅನುಮೋದನೆ ನೀಡಲಾಗಿರುತ್ತದೆ. ಹಾಗೂ E-Procutenent ನ್ನು ಈ ಆರ್ಥಿಕ ವರ್ಷದಲ್ಲಿ ಕೈಗೊಳ್ಳಲಾಗುವುದು. ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಂದ ಇ-ಔಷಧ ಮುಖಾಂತರ ಬೇಡಿಕೆ ಬಂದಲ್ಲಿ KSMSCL ಮುಖಾಂತರ ಖರೀದಿಸಿ ಸರಬರಾಜು ಮಾಡಲಾಗುವುದು ಎಂದು ತಿಳಿಸಿರುತ್ತಾರೆ.



