ಅಪರೇಷನ್ ಸಿಂದೂರ್ ಬಳಿಕ ಭಾರತದ ರಾಜತಾಂತ್ರಿಕ ಪ್ರಯತ್ನಗಳ ಮಹತ್ವದ ಭಾಗವಾಗಿ ಭಯೋತ್ಪಾದನೆಯ ವಿರುದ್ಧದ ಶೂನ್ಯ ಸಹಿಷ್ಣುತೆ ದೃಢ ನಿಲುವು ಸ್ಪಷ್ಟಪಡಿಸಲು ಹಾಗೂ ಅಂತಾರಾಷ್ಟ್ರೀಯ ಸಹಕಾರ ಬಲಪಡಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರನ್ನು ಒಳಗೊಂಡ ಸಂಸದೆ ಕನಿಮೋಳಿ ನೇತೃತ್ವದ ಸರ್ವಪಕ್ಷಗಳ ನಿಯೋಗವು ತನ್ನ ವಿದೇಶ ಭೇಟಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ ವಿರುದ್ದ ಜಾಗತಿಕವಾಗಿ ಗಮನ ಸೆಳೆಯುವ ಭಾರತದ ಅಭಿಯಾನದ ಪ್ರಯುಕ್ತ ನಿಯೋಗ ಮೊದಲ ದಿನ ಸ್ಪೇನಿನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿತು. ಮುಂಬೈ ಭೀಕರ ಉಗ್ರ ದಾಳಿಯಲ್ಲಿ ಬದುಕುಳಿದಿರುವ ಸ್ಪ್ಯಾನಿಷ್ ಉದ್ಯಮಿ ಆರ್ಟುರೊ ಫೆರ್ನಾಂಡಿಸ್ ಅಲ್ವಾರೆಜ್ ಅವರು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಖಂಡಿಸುವಲ್ಲಿ ನಿಯೋಗದ ಜೊತೆಯಾಗಿದ್ರು. ಭೇಟಿಯ ಕೊನೆಯ ದಿನದಂದು ಯುರೋಪ್ ಕೌನ್ಸಿಲ್ ಪಾರ್ಲಿಮೆಂಟರಿ ಅಸೆಂಬ್ಲಿಯ ಉಪಾಧ್ಯಕ್ಷ ಆಂಟೋನಿಯೊ ಗುಟೈರೆಜ್ ಲಿಮೋನ್ಸ್ ನೇತೃತ್ವದ ಸೆನೆಟ್ ವಿದೇಶಾಂಗ ವ್ಯವಹಾರಗಳ ಸಮಿತಿ ಹಾಗೂ ಭಯೋತ್ಪಾದನೆ ಪೀಡಿತ 4,800ಕ್ಕೂ ಹೆಚ್ಚು ಸಂತ್ರಸ್ತರೊAದಿಗೆ ನಿಂತಿರುವ ಸಂಘಟನೆ ಅಸೋಸಿಯಾಸಿಯನ್ ಡಿ ವಿಕ್ಟಿಮಾಸ್ ಡೆಲ್ ಟೆರರಿಸೊ ಹಾಗೂ ಸ್ಪ್ಯಾನಿಷ್ ಸರ್ಕಾರದ ಸದಸ್ಯರು, ಸಂಸದರು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದೆ.



