ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಈ ಬಾರಿ ಕೊಳೆ ರೋಗ ಬಾಧೆ ತಡೆಯಲು ಔಷಧಿ ಸಿಂಪಡಿಸುವುದಕ್ಕೆ ಎಡೆಬಿಡದೆ ಸುರಿಯುತ್ತಿರುವ ಮಳೆ ಅಡ್ಡಿಯಾಗಿದೆ.

ಈ ವರ್ಷ ಮುಂಗಾರು ಮಳೆ ನಿರೀಕ್ಷೆಗಿಂತ ಮೊದಲೇ ಆರಂಭವಾಗಿರುವುದರಿ0ದ ರೈತರಿಗೆ ಅಡಿಕೆ ಕೊಳೆರೋಗಕ್ಕೆ ಸಂಬ0ಧಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಅಡಿಕೆ ತೋಟಗಳನ್ನು ಹೊಂದಿರುವ ಕೃಷಿಕರು ಇದುವರೆಗೆ ಮೇ ತಿಂಗಳ ಕೊನೆಯಲ್ಲಿ ಮೊದಲ ಸುತ್ತಿನ ಔಷಧಿ ಸಿಂಪರಣೆಯನ್ನು ಮಾಡುತ್ತಿದ್ದರು. ಈ ಬಾರಿ ಮೇ ತಿಂಗಳ ಕೊನೆಯಲ್ಲಿ ಮಳೆಬಂದಿರುವುದರಿ0ದ ಔಷಧಿ ಸಿಂಪರಣೆ ಸಾಧ್ಯವಾಗಿಲ್ಲ. ಮಳೆಗಾಲದಲ್ಲಿ ಅಡಿಕೆ ಬೆಳೆಯನ್ನು ಶಿಲೀಂಧ್ರಗಳಿ0ದ ಹರಡುವ ಕೊಳೆ ರೋಗ ಭಾರೀ ಪ್ರಮಾಣದಲ್ಲಿ ನಾಶ ಮಾಡುತ್ತದೆ. ಇದಕ್ಕೆ ಪರಿಹಾರವಾಗಿ ಬೋರ್ಡೋ ದ್ರಾವಣವನ್ನು ಔಷಧಿಯಾಗಿ ಸಿಂಪಡಿಸಲಾಗುತ್ತದೆ.

ಮಳೆಗಾಲ ಆರಂಭಕ್ಕೆ ಮೊದಲೇ ಒಂದು ಬಾರಿ ಈ ದ್ರಾವಣ ಸಿಂಪರಿಸಿದರೆ ಬಳಿಕ 2-3 ಬಾರಿ ಈ ದ್ರಾವಣವನ್ನು ರೋಗ ಹತೋಟಿಗಾಗಿ ಸಿಂಪಡಿಸಲಾಗುತ್ತದೆ. ಕಳೆದ ಬಾರಿಯೂ ಔಷಧಿ ಸಿಂಪಡಿಸಲು ಮಳೆ ಬಿಡುವು ನೀಡಿರಲಿಲ್ಲ. ಜೊತೆಗೆ ಕಳೆದ ಬೇಸಿಗೆಯಲ್ಲಿ ನೀರಿಲ್ಲದೆ ತೋಟಗಳು ಒಣಗಿದ್ದವು, ಸಹಜವಾಗಿ ಫಸಲೂ ಅರ್ಧಕ್ಕರ್ಧ ಕಡಿಮೆಯಾಗಿತ್ತು. ಈ ಬಾರಿ ಬೇಸಿಗೆಯಲ್ಲಿ ಮಳೆ ಬಂದುದರಿAದ ಉತ್ತಮ ಫಸಲು ನಿರೀಕ್ಷೆ ಇತ್ತು. ಆದರೆ ಕೊಳೆ ನಿಯಂತ್ರಣ ಸಾಧ್ಯವಾಗದಿದ್ದರೆ ಅಡಿಕೆ ಎಳತಾಗಿರುವಾಗಲೇ ಉದುರಿ ನಷ್ಟ ಸಂಭವಿಸುವ ಆತಂಕವನ್ನು ಕೃಷಿಕರು ಎದುರಿಸುತ್ತಿದ್ದಾರೆ. ಅಡಿಕೆಗೆ ಔಷಧಿ ಸಿಂಪಡಿಸಲು ನುರಿತ ಕಾರ್ಮಿಕರು ಅಗತ್ಯ, ಅವರ ಕೊರತೆಯೂ ಕೃಷಿಕರನ್ನು ಬಾಧಿಸುತ್ತಿದೆ. ಆಧುನಿಕ ಪರಿಹಾರಗಳು ಬಂದಿವೆಯಾದರೂ ಅವುಗಳು ಕಾರ್ಮಿಕರ ಕೊರತೆಗೆ ಪರಿಹಾರ ಹುಡುಕುವ ಮಾದರಿಗಳಾಗಿ ಅಭಿವೃದ್ಧಿ ಹೊಂದಿಲ್ಲ.



