ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರಿಗೆ ಮತ್ತೆ ನೋಟೀಸ್‌ನ್ನ ಪೊಲೀಸ್ ಇಲಾಖೆ ಕೊಟ್ಟಿದೆ. ಎರಡನೇ ಬಾರಿಗೆ ಪುತ್ತೂರು ನಗರ ಠಾಣಾ ಪೊಲೀಸರು ಪುತ್ತಿಲ ಅವರಿಗೆ ನೋಟೀಸ್ ನೀಡಿದ್ದಾರೆ.

ಪೆಹಲ್ಗಾಮ್ ಉಗ್ರ ದಾಳಿ ಖಂಡಿಸಿ ಪುತ್ತೂರಿನಲ್ಲಿ ಪ್ರತಿಭಟನೆ ಸಂದರ್ಭ ಪುತ್ತಿಲ ಭಾಷಣ ಮಾಡಿದ್ರು. ಇಸ್ಲಾಂ ಧರ್ಮವನ್ನ ಭಯೋತ್ಪಾದನೆಗೆ ಹೋಲಿಸಿ ಭಾಷಣ ಮಾಡಿದ ಹಿನ್ನಲೆ ಈ ಬಗ್ಗೆ ಪುತ್ತೂರು ನಗರ ಠಾಣೆಗೆ ಅಶ್ರಫ್ ದೂರನ್ನ ನೀಡಿದ್ರು. ಅದರಂತೆ ಇಂದು ಪುತ್ತಿಲರಿಗೆ ನೋಟೀಸ್ ನೀಡಿದ ಪೊಲೀಸರು, ನೋಟೀಸ್ ಸಿಕ್ಕಿದ ತಕ್ಷಣ ವಿಚಾರಣೆಗೆ ಹಾಜರಾಗಬೇಕೆಂದು ಉಲ್ಲೇಖಿಸಿದ್ದಾರೆ.

ನಿನ್ನೆಯಷ್ಟೇ ಗಡಿಪಾರು ನೋಟೀಸ್ ನೀಡಿದ್ದ ಪುತ್ತೂರು ನಗರ ಠಾಣಾ ಪೊಲೀಸರು, ಇದೀಗ ಮತ್ತೆ ಅರುಣ್ ಕುಮಾರ್ ಪುತ್ತಿಲರಿಗೆ ನೋಟೀಸ್ ಕೊಟ್ಟಿದ್ದಾರೆ.



