ಸಾಲು ಸಾಲು ಹತ್ಯೆಗಳಿಂದ ಕಂಗೆಟ್ಟಿರುವ ದಕ್ಷಿಣ ಕನ್ನಡದಲ್ಲಿ ಇದೀಗ ಶಾಂತಿ ಮರುಸ್ಥಾಪನೆ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಜಿಲ್ಲೆಯ 36 ಜನರನ್ನು ಗಡಿಪಾರು ಮಾಡಲು ನಿರ್ಧರಿಸಿದೆ.ಪಟ್ಟಿಯಲ್ಲಿರುವ 36 ಜನರಿಗೂ ನೋಟೀಸ್ ಕಲಿಸಿರುವ ಪೊಲೀಸ್ ಇಲಾಖೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.

ಈ ನೋಟೀಸ್ ಸಿಗುತ್ತಿದ್ದಂತೆ ಗಡಿಪಾರು ಪಟ್ಟಿಯಲ್ಲಿರುವ ಪುತ್ತೂರಿನ ಅಬ್ದುಲ್ ಹಕೀಮ್, ಶಾಸಕ ಅಶೋಕ್ ರೈ ವಿರುದ್ಧ ಸಿಡಿದೆದ್ದಿದ್ದಾರೆ. ಶಾಸಕರ ಒತ್ತಡದ ಮೇರೆಗೆ ನನ್ನ ಮೇಲೆ ಒಂಬತ್ತು ಸುಳ್ಳು ಕೇಸ್ ದಾಖಲಿಸಿ ನನ್ನ ಗಡಿಪಾರಿಗೆ ಷಡ್ಯಂತ್ರ ರೂಪಿಸಲಾಗಿದೆ. 
ಶಾಸಕರ ತಪ್ಪುಗಳನ್ನು ಎತ್ತಿ ಹಿಡಿದು ಅವುಗಳ ವಿರುದ್ದ ಧ್ವನಿ ಎತ್ತಿದ್ದೇನೆ ಎಂಬ ಒಂದೇ ಒಂದು ಕಾರಣಕ್ಕೆ ಗಡಿಪಾರು ಪಟ್ಟಿಗೆ ನನ್ನ ಹೆಸರು ಸೇರಿಸಲಾಗಿದೆ. ಮುಸ್ಲಿಂರಿ0ದ ವೋಟು ಪಡೆದು ಗೆದ್ದು ನಿರಂತರವಾಗಿ ಮುಸ್ಲಿಂಮರಿಗೆ ಅನ್ಯಾಯ ಮಾಡಿರುವ ಅಶೋಕ್ ರೈ ವಿರುದ್ಧ ಮಾತನಾಡಿದ್ದೇನೆ ಎಂಬ ಕಾರಣಕ್ಕೆ ನನ್ನ ಮೇಲೆ ಸುಳ್ಳು ಕೇಸ್ ದಾಖಲಿಸಿರುವ ಇವರು ಯಾವ ಸೀಮೆಯ ರಾಜಕೀಯ ನಾಯಕ? ಅಬ್ದುಲ್ ರಹೀಮ್ ಹತ್ಯೆ ಹಿನ್ನಲೆ ಉಸ್ತುವಾರಿ ಸಚಿವರು ಭೇಟಿ ನೀಡಿದ ಸಂಧರ್ಭದಲ್ಲಿ ಮುಸ್ಲಿಂರ ಮನೆಗೆ ಭೇಟಿ ನೀಡಿ ಸಾಂತ್ವನ ನೀಡಬೇಕಾಗುತ್ತದೆ ಎಂದು ಮೊಬೈಲ್ ಸ್ವೀಚ್ ಆಫ್ ಮಾಡಿಕೊಂಡು ತಪ್ಪಿಸಿಕೊಂಡ ಅಶೋಕ್ ರೈ ಗೆ ರಾಜಕೀಯದ ಬಗ್ಗೆ ಕಿಂಚಿತ್ತೂ ತಿಳಿದಿಲ್ಲ ಎಂದು ಅಬ್ಬರಿಸಿದ್ದಾರೆ.



