ಪುತ್ತೂರಿನ ಬಿಜೆಪಿ ಮುಖಂಡ ಮತ್ತು ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಸೇರಿ ಒಟ್ಟು 36 ಜನರನ್ನು ಗಡಿಪಾರು ಮಾಡುವ ವಿಚಾರವಾಗಿ ಯುವಕನೊಬ್ಬ ಸೆಲ್ಫಿ ವಿಡಿಯೋ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಒಮ್ಮೆ ಪುತ್ತಿಲರ ವಿಷಯಕ್ಕೆ ಬಂದು ನೋಡಿ, ದಕ್ಷಿಣ ಕನ್ನಡದಲ್ಲಿ ಹಿಂದೂಗಳು ಸತ್ತಿದ್ದಾರ, ಬದುಕಿದ್ದಾರ ನೋಡೋಣ. ಹಿಂದೂ ಸಮಾಜ ಯಾವ ಅನ್ಯಾಯ ಮಾಡಿದೆ ಅಂತ ಗಡಿಪಾರು ಮಾಡುತ್ತಿದ್ದೀರಿ ಅದನ್ನು ಮೊದಲು ಹೇಳಿ ಆಮೇಲೆ ನೋಟೀಸ್ ಕೊಡಿ ಎಂದ ಯುವಕ. ನಿಮ್ಮ ತಾಕತ್ತನ್ನು ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮುಗಲಭೆ ನಿಯಂತ್ರಿಸುವಲ್ಲಿ ಪ್ರದರ್ಶಿಸಿ. ನಿಮ್ಮ ಈ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವುದಿಲ್ಲ, ನಾವು ಹಿಂದೂ ಕಾರ್ಯಕರ್ತರು, ಪ್ರತಿಕ್ಷಣ ಹಿಂದುತ್ವಕ್ಕೆ ದುಡಿಯುವವರು ಮುಂದೆಯೂ 24 ಗಂಟೆ ಹಿಂದುತ್ವಕ್ಕಾಗಿ ದುಡಿಯುತ್ತೇವೆ. ಅರುಣಣ್ಣನ ವಿಷಯಕ್ಕೆ ಬಂದ್ರೆ ಬಿಡುವವರು ನಾವಲ್ಲ ಎಂದು ಪೊಲೀಸ್ ಇಲಾಖೆ ಮತ್ತು ಸರಕಾರಕ್ಕೆ ಯುವಕ ವಿಡಿಯೋದ ಮೂಲಕ ಸವಾಲೆಸೆದಿದ್ದಾನೆ.



