ಸತತ 17 ವರ್ಷಗಳ ಬಳಿಕ ಆರ್‌ಸಿಬಿ ಐಪಿಎಲ್ ಪಂದ್ಯವನ್ನ ಗೆದ್ದು ಬೀಗಿದೆ. 18ನೇ ಆವೃತ್ತಿಯ ಐಪಿಎಲ್ ಚಾಂಪಿಯನ್‌ಶಿಪ್ ಮುಡಿಗೇರಿಸಿಕೊಂಡ ಆರ್‌ಸಿಬಿ ತಂಡ ಸಂಭ್ರಮದ ಕಡಲಲ್ಲಿ ತೇಲಿದೆ.

ಇನ್ನು ವಿರಾಟ್ ಕೊಹ್ಲಿ ಮೈದಾನದಲ್ಲೇ ಆನಂದಭಾಷ್ಪ ಹರಿಸಿದ್ರು. ನನ್ನ ಹೃದಯ ಬೆಂಗಳೂರಿಗಾಗಿ, ನನ್ನ ಆತ್ಮ ಬೆಂಗಳೂರಿಗಾಗಿ, ನಾನು ಮಗುವಿನಂತೆ ಮಲಗುತ್ತೇನೆ.

ನಾನು ಐಪಿಎಲ್ ಆಡುವ ಕೊನೆ ದಿನದವರೆಗೂ ಇದೇ ತಂಡಕ್ಕೆ ಆಡುತ್ತೇನೆ ಅನ್ನುವ ಮೂಲಕ ಮತ್ತೊಮ್ಮೆ ಆರ್‌ಸಿಬಿ ಅಭಿಮಾನಿಗಳ ಮನಸ್ಸನ್ನ ಗೆದ್ದಿದ್ದಾರೆ.



