ನನ್ನ ಮೇಲೆ ಗಡಿಪಾರು ಆದೇಶ ಇದ್ದರೂ ಮುಂದಿನ ದಿನಗಳಲ್ಲಿ ಅದನ್ನು ಸವಾಲಾಗಿ ಸ್ವೀಕರಿಸಿ ಇಡೀ ಹಿಂದೂ ಸಮಾಜಕ್ಕೆ ನ್ಯಾಯ ಕೊಡುವ ಕೆಲಸವನ್ನು ಮಾಡಲಿದ್ದೇನೆ.

ಇಂದಿನಿ0ದ ರಾತ್ರಿ ಪೊಲೀಸ್ ಇಲಾಖೆ ಯಾವುದೇ ಹಿಂದೂ ಕಾರ್ಯಕರ್ತನ ಮನೆಗೆ ನುಗ್ಗುವ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಹಿಂದೂ ಸಮಾಜದ ಶಕ್ತಿ ಏನೆಂಬುದನ್ನು ತೋರಿಸಲಿದ್ದೇವೆ ಎಂದು ಅರುಣ್‌ಕುಮಾರ್ ಪುತ್ತಿಲ ಎಚ್ಚರಿಕೆ ನೀಡಿದ್ದಾರೆ.
ಇವರು ಮುಕ್ರಂಪಾಡಿ ಸುಭದ್ರ ಸಭಾಭವನದಲ್ಲಿ ಹಿಂದೂ ಕಾರ್ಯಕರ್ತರ ಮನೆಗೆ ರಾತ್ರೋ ರಾತ್ರಿ ನುಗ್ಗಿ ದರ್ಪ ತೋರಿಸುತ್ತಿರುವ ಸರ್ವಾಧಿಕಾರಿ ವ್ಯವಸ್ಥೆ ಹಾಗೂ ಗಡಿಪಾರು ಆದೇಶ ವಿರೋಧಿಸಿ ನಡೆದ ಬೃಹತ್ ಖಂಡನಾ ಸಭೆಯಲ್ಲಿ ಮಾತನಾಡಿದ್ರು. ಇದೇ ವೇಳೆ ಗಣರಾಜ ಭಟ್ ದಿಕ್ಸೂಚಿ ಭಾಷಣ ಮಾಡಿದ್ದಾರೆ.



