ಮಂಗಳೂರಲ್ಲಿ ನಡೆದ ಮುಸ್ಲಿಂ ಯುವಕನ ಬರ್ಬರ ಹತ್ಯೆ ಕೇಸ್‌ಗೆ ಸಂಬ0ಧಪಟ್ಟ0ತೆ ಮತ್ತಿಬ್ಬರನ್ನು ಬಂಧಿಸಲಾಗಿದೆ.

ಬಂಧಿತರನ್ನು ತೆಂಕಬೆಳ್ಳೂರು ಗ್ರಾಮದ ಅಭಿನ್ ರೈ ಮತ್ತು ಬಡಗಬೆಳ್ಳುರು ಗ್ರಾಮದ ತೇಜಾಕ್ಷ ಎಂದು ತಿಳಿದು ಬಂದಿದೆ. ಈಗಾಗಲೇ ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ. ಇದೀಗ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರಿಂದ ಇಬ್ಬರ ಬಂಧನವಾಗಿದೆ.



