ಬಜೆ ಡ್ಯಾಂನಿ0ದ ಉಡುಪಿ ನಗರಕ್ಕೆ ನೀರು ಪೂರೈಸುವ ಜವಾಬ್ದಾರಿ ಹಾಗೂ ನಿರ್ವಹಣೆಯನ್ನು ವಾರಾಹಿ ನೀರು ಸರಬರಾಜು ಗುತ್ತಿಗೆ ಸಂಸ್ಥೆಯಾದ ಸುಯೆಝ್ ಪ್ರೊಜೆಕ್ಟ್ ಅವರಿಗೆ ಹಸ್ತಾಂತರಿಸಲು ಉಡುಪಿ ನಗರಸಭೆಯಿಂದ ನಿರ್ಧರಿಸಲಾಗಿದೆ. ಉಡುಪಿ ನಗರಕ್ಕೆ ವಾರಾಹಿ ನೀರು ಸರಬರಾಜು ಸಂಬ0ಧ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ನಡೆದ ವಾರಾಹಿ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಮಾಡಲಾಯಿತು. 
ಅದರಂತೆ ಮೂರು ತಿಂಗಳುಗಳ ಕಾಲ ಪ್ರಾಯೋಗಿಕವಾಗಿ ನೀರು ಪೂರೈಸಲು ಜವಾಬ್ದಾರಿಯನ್ನು ಸುಯೆಝ್ ಪ್ರೋಜೆಕ್ಟ್ನವರಿಗೆ ವಹಿಸಿಕೊಡಲಾಯಿತು. ಈ ಬಗ್ಗೆ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿದ್ದಾರೆ. ಬಳಿಕ ವಾರಾಹಿ ನೀರು ಪೂರೈಕೆಯ ಗುತ್ತಿಗೆ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಸುದೀಪ್ ಮಾತನಾಡಿ, ವಾರಾಹಿ ನೀರು ಸರಬರಾಜು ಮತ್ತು ನಿರ್ವಹಣೆ ಯನ್ನು ನಮಗೆ ಎಂಟು ವರ್ಷಗಳಿಗೆ ನೀಡಿದ್ದು, ಇದೀಗ ಬಜೆಯಿಂದ ನೀರು ಪೂರೈಕೆ ಮಾಡುವ ಜವಾಬ್ದಾರಿಯನ್ನು ಕೂಡ ಕೂಡಲೇ ನೀಡಬೇಕು. ಇಲ್ಲಿರುವ ಎಲ್ಲ ಸಮಸ್ಯೆಗಳನ್ನು ಸರಿಪಡಿಸಿ ದಿನ 24ಗಂಟೆ ನೀರು ಪೂರೈಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.



