ಕರಾವಳಿಯಲ್ಲಿ ಹಿಂದೂ ನಾಯಕರು, ಕಾರ್ಯಕರ್ತರ ಟಾರ್ಗೆಟ್ ವಿಚಾರಕ್ಕೆ ಸಂಬಂಧಪಟ್ಟಂತೆ ವಿಶ್ವ ಹಿಂದೂ ಪರಿಷತ್‌ನ ದಕ್ಷಿಣ ಪ್ರಾಂತ ಮುಖಂಡ ಸುನಿಲ್ ಕೆ.ಆರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ರಾಷ್ಟ್ರೀಯತೆ, ಧರ್ಮದ ಪರವಾಗಿ ಕೆಲಸ ಮಾಡುವವರನ್ನ ಟಾರ್ಗೆಟ್ ಮಾಡಲಾಗುತ್ತಿದೆ. 
ಬಲಪಂಥೀಯ ಸಂಘಟನೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡವರನ್ನೇ ಗುರಿಯಾಗಿಸಲಾಗಿದೆ. ಬಲಪಂಥೀಯ ಸಂಘಟನೆ ಸಕ್ರೀಯ ಕಾರ್ಯಕರ್ತರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕಾರ್ಯಕರ್ತರ ಮನೆಗೆ ಪೊಲೀಸರು ತಡರಾತ್ರಿ ತೆರಳಿ ಕಿರುಕುಳ ನೀಡೋದು ಸರ್ವೇ ಸಾಮಾನ್ಯವಾಗಿದೆ. ಇದು ಮುಂದುವರೆದರೆ ದೊಡ್ಡ ಮಟ್ಟದ ಪ್ರತಿಭಟನೆ ನಡೆಯಲಿದೆ ಎಂದು ಎಚ್ಚರಿಕೆಯನ್ನು ಕೊಟ್ಟಿದ್ದಾರೆ.



