ರಾಜ್ಯ ಸರಕಾರ ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳನ್ನು, ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕುವ ಕಾರ್ಯಕ್ಕೆ ಇಳಿದಿದೆ, ನಿಮ್ಮ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಹಿಂದೂಗಳ ಮೇಲೆ ಸವಾರಿ ಮಾಡಿ, ನಮ್ಮನ್ನು ಕೆಣಕಿದರೆ ನಾವು ಸಮ್ಮನೆ ಇರುವುದಿಲ್ಲ, ನಿಮ್ಮ ಷಡ್ಯಂತರಕ್ಕೆ ತಕ್ಕ ಉತ್ತರ ನೀಡಿಯೇ ನೀಡುತ್ತೇವೆ ಎಂದು ಬಿಜೆಪಿ ಮುಖಂಡ ಮುರಳಿಕೃಷ್ಣ ಹಸಂತಡ್ಕ ಎಚ್ಚರಿಸಿದ್ದಾರೆ.
ಇವರು ಕಡಬ ಠಾಣೆಯ ಎದರು ಹಿಂದೂ ಕಾರ್ಯಕರ್ತರ ಮನೆಗೆ ಕಡಬ ಪೋಲೀಸರು ರಾತ್ರಿ ತೆರಳಿ ಜಿಪಿಎಸ್ ಫೊಟೋ ತೆಗೆದುದಲ್ಲದೆ, ಇದನ್ನು ಪ್ರಶ್ನಿಸಿದ ಹಿಂದೂ ಕಾರ್ಯಕರ್ತರ ಮೇಲೆ ಸೊಮೊಟೋ ಕೇಸ್ ದಾಖಲಿಸಿರುವುದನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ್ರು. ಯಾವುದೇ ಪ್ರಕರಣಗಳಿಲ್ಲದ ಕಾರ್ಯಕರ್ತ ಪುನೀತ್ ಅವರ ಮನೆಗೆ ತಡ ರಾತ್ರಿ ನುಗ್ಗಿರುವ ಇಲ್ಲಿನ ಠಾಣಾಧಿಕಾರಿ ಅಕ್ಷಯ್ ಡವಗಿ ನಿನ್ನ ಮೇಲೆ ರೌಡಿಶೀಟರ್ ಓಪನ್ ಮಾಡುತ್ತೇನೆ ಎಂದು ದಮ್ಕಿ ಹಾಕುತ್ತಾರೆ. ಹಿಂದೂ ಸಮಾಜದ ರಕ್ಷಣೆಗೆ ಕೆಲಸ ಮಾಡುವ ಕಾರ್ಯಕರ್ತರನ್ನು ರೌಡಿಶೀಟರ್ ಮಾಡುವುದಿದ್ದರೆ ನೀವು ಸಂವಿಧಾನ ರಕ್ಷಣೆ ಮಾಡುತ್ತೀರಾ ಅಥವಾ ಯಾರದ್ದೂ ಒತ್ತಡಕ್ಕೆ ಮಣಿದು , ದುಡ್ಡಿನ ಆಸೆಗೆ, ಭಡ್ತಿಗೋಸ್ಕರ ಈ ಕಾರ್ಯ ಮಾಡುತ್ತೀರಾ ಎಂದು ಮುರಳಿಕೃಷ್ಣ ಹಸಂತಡ್ಕ ತೀವ್ರವಾಗಿ ಪ್ರಶ್ನಿಸಿದ್ದಾರೆ.
ಮಾಧ್ಯಮ ಲೋಕದಲ್ಲಿ ಸುದೀರ್ಘ ದುಡಿಮೆ ಮತ್ತು ತನ್ನ ಕಲಾತ್ಮಕ ಕ್ಯಾಮರಾ ಕೌಶಲ್ಯದಿಂದ ಜನಮನ ಸೆಳೆದಿದ್ದ ನಾಗರಾಜ್ ಇಂದು ನಿಧನರಾಗಿದ್ದಾರೆ. ಆರ್ಥಿಕ…
ಆಂಬ್ಯುಲೆನ್ಸ್ ವಾಹನವೊಂದಕ್ಕೆ ಸೈಡ್ ಬಿಡದೆ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸ್ಕೂಟರ್ ಸವಾರನೋರ್ವನನ್ನು ಪೋಲೀಸರು ಬಂಧಿಸಿದ್ದಾರೆ. ಪುತ್ತೂರು ಬೆಟ್ಟಂಪಾಡಿ ನಿವಾಸಿ…
ಅನಿವಾಸಿ ಭಾರತೀಯ ಉದ್ಯಮಿ, ಸಮಾಜ ಸೇವಕ ಝಕರಿಯಾ ಜೋಕಟ್ಟೆ ಅವರಿಗೆ ಹೊರನಾಡ ಕನ್ನಡಿಗ ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ…
ಪಾಣೆಮಂಗಳೂರು ಹಳೆ ಸೇತುವೆ ಬಳಿ ನಾಪತ್ತೆಯಾದ ಆಟೋ ಚಾಲಕನ ಶವ ಪತ್ತೆಯಾಗಿದೆ. ಪಾಣೆಮಂಗಳೂರು ಹಳೆ ಸೇತುವೆಯ ಬಳಿ ಇಲೆಕ್ಟಿಕ್ ಆಟೋ…
ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹಲವಾರು ಮಂದಿಯಿಂದ ಕೋಟ್ಯಾಂತರ ಹಣ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ದಂಪತಿಯನ್ನು ಕಾವೂರು…
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಮದುವೆಯ ವಾಹನವೊಂದು ಬಿಸಿಲೆ ಘಾಟ್ ರಸ್ತೆಯ ತಿರುವಿನಲ್ಲಿ ಪಲ್ಟಿಯಾಗಿ ವಾಹನದಲ್ಲಿದ್ದ 20ಕ್ಕೂ…