ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಕಟಪಾಡಿ ಸಮೀಪದ ಸುಭಾಷ್ ನಗರ ನಿವಾಸಿ ಮುದಾಸ್ಸಿರ್ (23) ಹಾಗೂ ಉಡುಪಿ ತಾಲೂಕಿನ ಉದ್ಯಾವರ ನಿವಾಸಿ ಅಡೆನ್ ಲೋಬೋ(18) ಬಂಧಿತ ಆರೋಪಿಗಳು. ಈ ಇಬ್ಬರು ಜೂನ್ 4ರಂದು ಕುಂದಾಪುರ ತಾಲೂಕಿನ ಕಸಬಾ ಗ್ರಾಮದ ಕೋಡಿ ಚಕ್ರೇಶ್ವರಿ ದೇವಸ್ಥಾನದ ಸಮೀಪ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದು, ಈ ವೇಳೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿAದ ಅಂದಾಜು 2,49,440 ಲಕ್ಷ ಮೌಲ್ಯದ 124.72 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು, ಪಿ ಒರಾಕಲ್ ಪ್ಲ್ಯಾಸ್ಟಿಕ್ ಬಾಕ್ಸ್-1, ಇನ್ಸುಲಿನ್ ಸಿರಿಂಜ್-9, ಎನರ್ ಮೆಕ್ ಕಪ್ಪು ಬ್ಯಾಗ್-1, ಫ್ರೆಶ್ ಪ್ಲ್ಯಾಸ್ಟಿಕ್ ಬಾಕ್ಸ್-1, ವೇಯಿಂಗ್ ಮೇ
ಶಿನ್-2, 20 ಸಣ್ಣ ಸಣ್ಣ ಸ್ಟೀಲ್ ಡಬ್ಬ ಮತ್ತು 2 ಸ್ಟೀಲ್ ಚಮಚ ಇರುವ ಪ್ಲಾಸ್ಟೀಕ್ ಬಾಕ್ಸ್-1, 36-ಪ್ಲಾಸ್ಟೀಕ್ ಜಿಪ್ ಲಾಕ್ ಕವರ್, ನಗದು 4540 ರೂ, ಡ್ರಾಗನ್ ಚೂರಿ-1, ಮೊಬೈಲ್-2 ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ



