ಇತರೆ

ಮಂಗಳೂರು: ನಂತೂರ್ ಜಂಕ್ಷನ್‌ನಲ್ಲಿ ಮೂರು ದಿಕ್ಕುಗಳಲ್ಲಿ ಎಡಭಾಗಗಳು ಸಿಗ್ನಲ್‌ನಿಂದ ಮುಕ್ತ

ಮಂಗಳೂರು ನಗರದ ಅತ್ಯಂತ ವಾಹನ ದಟ್ಟನೆಯ ಪ್ರದೇಶವಾದ ನಂತೂರು ಜಂಕ್ಷನ್‌ನಲ್ಲಿ ವಾಹನಗಳಿಗೆ ಫ್ರೀ ಲೆಫ್ಟ್ ಅಂದರೆ ಎಡಭಾಗದಲ್ಲಿ ತಿರುವು ತೆಗೆದುಕೊಂಡು ಚಲಿಸುವ ವಾಹನಗಳಿಗೆ ಮುಕ್ತ ಎಡಭಾಗವನ್ನು ಕಲ್ಪಿಸಲಾಗಿದೆ. ಈ ಸಂಬ0ಧಿತ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪೂರ್ಣಗೊಳಿಸಿದೆ.

ನಂತೂರು ಜಂಕ್ಷನ್ನಿನ ಮೂರು ದಿಕ್ಕುಗಳಲ್ಲಿ ಎಡಭಾಗವನ್ನು ಸಿಗ್ನಲ್‌ನಿಂದ ಮುಕ್ತಗೊಳಿಸಿ ವಾಹನಗಳ ಮುಕ್ತ ಚಲನೆಗೆ ಅವಕಾಶ ಮಾಡಿಕೊಡಲಾಗಿದೆ. ನಂತೂರು ಜಂಕ್ಷನ್ನಿನಲ್ಲಿ ಕದ್ರಿ ಮಲ್ಲಿಕಟ್ಟೆಯಿಂದ ಸುರತ್ಕಲ್ ಗೆ ಸಾಗುವ ರಸ್ತೆಯ ಎಡ ಭಾಗದಲ್ಲಿ ಮುಕ್ತ ವಾಹನ ಸಂಚಾರಕ್ಕೆ ಈ ಮೊದಲೇ ಅವಕಾಶ ಒದಗಿಸಲಾಗಿತ್ತು. ಕೊಚ್ಚಿ-ಪನ್ವೇಲ್ ರಾಷ್ಟ್ರೀಯ ಹೆದ್ದಾರಿ 66,ಮತ್ತು ಮಂಗಳೂರು-ಬೆ0ಗಳೂರು ರಾಷ್ಟ್ರೀಯ 75 ಹಾಗು ಮಂಗಳೂರು-ಮಡಿಕೇರಿ ಟ್ರಂಕ್ ರಸ್ತೆ ಅಂದರೆ ಕದ್ರಿಯಿಂದ ಬರುವ ರಸ್ತೆ ಸೇರುವ ನಂತೂರು ಜಂಕ್ಷನ್ ನಲ್ಲಿ ಬೆಳಿಗ್ಗೆ ಮತ್ತು ಸಂಜೆಯ ವೇಳೆ ತೀವ್ರವಾದ ವಾಹನ ದಟ್ಟಣೆ ಇರುತ್ತದೆ. ಇಲ್ಲಿ ರಸ್ತೆಯನ್ನು ಅಗಲಗೊಳಿಸಬೇಕು ಎಂಬ ಬೇಡಿಕೆ ಅನೇಕ ವರ್ಷಗಳಿಂದ ಇತ್ತು. ಆದರೆ ನ್ಯಾಯಾಲಯದಲ್ಲಿ ಪ್ರಕರಣಗಳು ಇದ್ದುದರಿಂದ ರಸ್ತೆ ವಿಸ್ತರಣೆಗೆ ಅಡ್ಡಿಯಾಗಿತ್ತು. ಈಗ ಅವು ಪರಿಹಾರವಾಗಿವೆ.

ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಈ ವೃತ್ತದಲ್ಲಿ ವಾಹನ ಸಂಚಾರವನ್ನು ಸುಗಮಗೊಳಿಸಲು ಎಡಭಾಗದಲ್ಲಿ ಮುಕ್ತ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಕೋರಿದ್ದರು. ಅಲ್ಲಿದ್ದ ಹೊಂಡಗಳನ್ನು, ಬಿರುಕುಗಳನ್ನು ಮುಚ್ಚಿ ವಾಹನಗಳ ಸುಗಮ ಸಂಚಾರಕ್ಕೆ ತಡೆಯಾಗುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸೂಚಿಸಿದ್ದರು. ವೃತ್ತದಲಿದ್ದ ಹೊಂಡಗಳಿ0ದ ಇಲ್ಲಿ ವಾಹನ ಸಂಚಾರ ನಿಧಾನಗೊಳ್ಳುತ್ತಿತ್ತು. ಒಂದು ವಾರದಿಂದ ಮಳೆ ಬಿಡುವು ನೀಡಿರುವುದರಿಂದ ಕಾಮಗಾರಿಯನ್ನು ಕೈಗೆತ್ತಿಕೊಂಡ ಹೆದ್ದಾರಿ ಪ್ರಾಧಿಕಾರ ಶನಿವಾರದಂದು ಎಡ ಮುಕ್ತ ಸಂಚಾರಕ್ಕೆ ಅವಶ್ಯವಾದ ರಸ್ತೆಯ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಇದರಿಂದಾಗಿ ಸುರತ್ಕಲ್ ಭಾಗದಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬರುವ ವಾಹನಗಳು ನಂತೂರು ಜಂಕ್ಷನ್ನಿನಲ್ಲಿ ಸುಲಭವಾಗಿ ಎಡಕ್ಕೆ ತಿರುವು ತೆಗೆದುಕೊಂಡು ಬಿ.ಸಿ.ರಸ್ತೆ, ಕಡೆಗೆ ಸಂಚರಿಸಬಹುದಾಗಿದೆ. ಬಿ.ಸಿ.ರಸ್ತೆ ಕಡೆಯಿಂದ ಬರುವ ವಾಹನಗಳು ಈ ಜಂಕ್ಷನ್ನಿನಲ್ಲಿ ಎಡಕ್ಕೆ ತಿರುವು ಪಡೆದುಕೊಂಡು ಪಂಪ್ ವೆಲ್ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಾಗಬಹುದಾಗಿದೆ. ಮತ್ತು ಪಂಪ್ ವೆಲ್ ಕಡೆಯಿಂದ ಬರುವ ವಾಹನಗಳು ಕದ್ರಿ ಮಲ್ಲಿಕಟ್ಟೆಗೆ ಮುಕ್ತವಾಗಿ ಸಾಗಬಹುದಾಗಿದೆ. ಮುಗ್ರೋಡಿ ಕನ್ಸ್ಟ್ರಕ್ಷನ್ ಸಂಸ್ಥೆಯ ಮೂಲಕ ಈ ರಸ್ತೆಗಳಿಗೆ ಬಿಟುಮನ್ ಅಂದರೆ ಡಾಮಾರ್ ಮೇಲ್ಪದರವನ್ನು ಇಲಾಖೆ ಒದಗಿಸಿದೆ. ನಂತೂರು ಜಂಕ್ಷನ್ನಿನ ಎಲ್ಲಾ ನಾಲ್ಕು ಕಡೆಗಳಲ್ಲಿ ಮುಕ್ತ ಎಡ ಸಂಚಾರವನ್ನು ಒದಗಿಸಿರುವುದರಿಂದ ನಿರ್ದಿಷ್ಟವಾಗಿ ಬೆಳಿಗ್ಗೆ ಮತ್ತು ಸಂಜೆ ಈ ವೃತ್ತ ಎದುರಿಸುತ್ತಿದ್ದ ವಾಹನ ದಟ್ಟಣೆ ಮತ್ತು ಸಂಚಾರ ಅವ್ಯವಸ್ಥೆಗೆ ಕಡಿವಾಣ ಬೀಳುವ ನಿರೀಕ್ಷೆ ಇದೆ.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಬಂಟ್ವಾಳ: ಬಸ್‌ನಿಂದ ಇಳಿದು ರಸ್ತೆ ಬದಿಗೆ ತೆರಳುತ್ತಿದ್ದ ಕೂಲಿ ಕಾರ್ಮಿಕನಿಗೆ ಕಾರು ಡಿಕ್ಕಿ; ಸ್ಥಳದಲ್ಲೇ ಸಾವು

ಬಸ್‌ನಿಂದ ಇಳಿದು ರಸ್ತೆ ಬದಿಗೆ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕೂಲಿ ಕಾರ್ಮಿಕನೊಬ್ಬ ಸ್ಥಳದಲ್ಲೇ…

4 hours ago

ಉಡುಪಿ: ಕೊಲೆ ಯತ್ನ ಪ್ರಕರಣದ ಇಬ್ಬರು ಆರೋಪಿಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ…!

ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದ ಆರೋಪಿಗಳಿಬ್ಬರ ಮೃತದೇಹಗಳು ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಚಾರ್ಸಲ್ ಪ್ರದೇಶದ…

1 day ago

ಉಡುಪಿ: ಉಡುಪಿಯಲ್ಲಿ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್ ಕಳವು: ಮುದ್ದಾಡಿ ಹಾಡಿಯಲ್ಲಿ ಪತ್ತೆ…!

ಉಡುಪಿ ನಗರದ ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್‌ವೊಂದು ಕಳವಾಗಿರುವ ಘಟನೆ ಸೆ.29ರಂದು ಬೆಳಕಿಗೆ ಬಂದಿದ್ದು,…

1 day ago

ಮಂಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ಮಂಗಳೂರು ವಿವಿಯ 16 ಪಿಜಿ ಕೋರ್ಸ್‌ಗಳು ಸ್ಥಗಿತ.

ಮಂಗಳೂರು ವಿಶ್ವವಿದ್ಯಾನಿಲಯದ 16 ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು 2026-27ನೇ ಶೈಕ್ಷಣಿಕ ಸಾಲಿನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೋರ್ಸ್‌ಗಳನ್ನು ಮುಂದುವರಿಸಲು ಅಗತ್ಯವಿರುವಷ್ಟು ವಿದ್ಯಾರ್ಥಿಗಳು…

1 day ago

ಮಂಗಳೂರು: ಮಂಗಳೂರು-ಉಡುಪಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹೊಸ ಆಶಾಕಿರಣ

ಮಂಗಳೂರು ಮತ್ತು ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕ ಭಾಗದಲ್ಲಿ ಕರ್ನಾಟಕ ಹೈಕೋರ್ಟ್‌ನ ಸರ್ಕ್ಯೂಟ್ ಬೆಂಚ್ ಅಥವಾ ಶಾಶ್ವತ ಪೀಠ ಸ್ಥಾಪಿಸುವ…

1 day ago

ಮಂಗಳೂರು: ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ: ಗಾಯಗೊಂಡಿದ್ದ ಚಾಲಕ ಸಾವು

ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಪ್ರಯಾಣಿಸುತ್ತಿದ್ದ ಕಾರಿಗೆ ಗೂಡ್ಸ್ ಆಟೋ ರಿಕ್ಷಾ ಡಿಕ್ಕಿಯಾಗಿ, ತೀವ್ರವಾಗಿ ಗಾಯಗೊಂಡಿದ್ದ ಆಟೋ…

1 day ago