ಮಂಗಳೂರಿನಿಂದ ಜಮ್ಮು ಕತ್ರಾಕ್ಕೆ ಸಂಚರಿಸುತ್ತಿದ್ದ ನವಯುಗ ಎಕ್ಸ್ಪ್ರೆಸ್ ರೈಲು ಸ್ಥಗಿತಗೊಂಡು ಐದು ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ರೈಲು ಸೇವೆಯನ್ನು ಪುನರಾರಂಭಿಸುವಂತೆ ಒತ್ತಾಯಿಸಿ ಆನ್‌ಲೈನ್ ಸಹಿ ಸಂಗ್ರಹ ಅಭಿಯಾನವನ್ನು ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರ ಸಮಿತಿ ಆರಂಭಿಸಿದೆ. ಕರಾವಳಿಯ ರೈಲು ಬಳಕೆದಾರರು ಕೈಜೋಡಿಸಿದ್ದು, ರೈಲು ಮಾರ್ಗವನ್ನು ಬದಲಾಯಿಸಿ ಪುನರಾರಂಭಿಸುವಂತೆ ಆಗ್ರಹಿಸಿದ್ದಾರೆ.
ದೇಶದ ಅತಿ ದೀರ್ಘ ಪ್ರಯಾಣದ ರೈಲುಗಳ ಪೈಕಿ 4ನೇ ಸ್ಥಾನ ಪಡೆದಿದ್ದ ನವಯುಗ ಎಕ್ಸ್ಪ್ರೆಸ್ ರೈಲು ಮಂಗಳೂರಿನಿಂದ ಜಮ್ಮು ಕತ್ರಾಕ್ಕೆ ತನ್ನ ಸೇವೆ ನಿಲ್ಲಿಸಿ ಆಗಲೇ 5 ವರ್ಷ ಕಳೆದಿದೆ. ಬಹು ಬೇಡಿಕೆಯ ಈ ರೈಲು ಸಂಚಾರ ಮತ್ತೆ ಆರಂಭಿಸಬೇಕೆಂದು ಒತ್ತಾಯಿಸಿ ಆನ್‌ಲೈನ್ ಮೂಲಕ ಹಕ್ಕೊತ್ತಾಯ ಅಭಿಯಾನ ಆರಂಭಿಸಲಾಗಿದೆ. ಜೂ.6ರಂದು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ವರ್ಚುವಲ್ ಸಹಿ ಸಂಗ್ರಹ ಅಭಿಯಾನ ಆರಂಭಗೊಂಡಿದ್ದು, ಜುಲೈ 6 ರ ರಾತ್ರಿ 12 ಗಂಟೆಯ ತನಕ ನಡೆದಿದೆ. ಕರ್ನಾಟಕ ಕರಾವಳಿಯಿಂದ ಜಮ್ಮು ಮತ್ತು ಕಾಶ್ಮಿರಕ್ಕೆ ನೇರ ರೈಲು ಸೇವೆ ಪುನರಾರಂಭಿಸುವ ಉದ್ದೆಶದಿಂದ ಅಭಿಯಾನ ಆರಂಭಿಸಲಾಗಿದೆ. ಮಂಗಳೂರು ಸೆಂಟ್ರಲ್- ಶ್ರಿ?ಮಾತಾ ವೈಷ್ಣೊ?ದೇವಿ ಕತ್ರ ನವಯುಗ ಎಕ್ಸ್ಪ್ರೆಸ್ ರೈಲು 1990 ರಲ್ಲಿ ಮಂಗಳೂರಿನಿಂದ ಜಮ್ಮು ತಾವಿ ತನಕ ಸೇವೆ ನೀಡುತ್ತಿದ್ದು, 2015ರಲ್ಲಿ ಕತ್ರ ತನಕ ವಿಸ್ತರಿಸಲಾಗಿತ್ತು.
ಪ್ರತೀ ಸೋಮವಾರ ಸಂಜೆ 5 ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹೊಸದಿಲ್ಲಿ, ಹರಿಯಾಣ, ಪಂಜಾಬ್ ಮೂಲಕ ಜಮ್ಮು ಮತ್ತು ಕಾಶ್ಮಿ?ರದ ಕತ್ರಕ್ಕೆ 13 ರಾಜ್ಯಗಳನ್ನು ಬಳಸಿಕೊಂಡು ತಲುಪುತ್ತಿತ್ತು. ಒಟ್ಟು 3686 ಕಿ.ಮಿ. ಕ್ರಮಿಸಲು 70 ಗಂಟೆ 5 ನಿಮಿಷ ಅವಧಿ ತೆಗೆದುಕೊಳ್ಳುತ್ತಿದ್ದ ರೈಲು ಪ್ರಯಾಣ ದೂರದ ಲೆಕ್ಕದಲ್ಲಿ ದೇಶದ 4ನೇ ದೊಡ್ಡ ರೈಲು ಎಂಬ ಖ್ಯಾತಿಗೆ ಪಾತ್ರವಾಗಿತ್ತು. ದಾರಿಯುದ್ದಕ್ಕೂ ದೇಶದ ಪ್ರಸಿದ್ಧ ಯಾತ್ರಾಸ್ಥಳಗಳನ್ನು ಸಂಪರ್ಕಿಸುತ್ತಿತ್ತು. 20 ಕೋಚ್‌ಗಳ ರೈಲಿಗೆ ಈರೋಡಿನಲ್ಲಿ ತಿರುನೆಲ್ವೆಲಿಯಿಂದ ಬರುವ ಸ್ಲಿಪ್ ಕೋಚ್‌ಗಳನ್ನು ಜೋಡಿಸಲಾಗುತ್ತಿತ್ತು. ಕೋವಿಡ್ ಕಾಲಘಟ್ಟದಲ್ಲಿ ದೇಶದ ಎಲ್ಲ ರೈಲು ಸೇವೆಗಳು ನಿಂತಿದ್ದು, ಬಳಿಕ ಒಂದೊಂದೇ ಪುನರಾರಂಭಗೊಂಡಿತ್ತು. ಆದರೆ ಮಂಗಳೂರು ಸೆಂಟ್ರಲ್- ಕತ್ರಾ ನವಯುಗ ಎಕ್ಸ್ಪ್ರೆಸ್ ಮಾತ್ರ ಹಳಿಗೆ ಮರಳಲೇ ಇಲ್ಲ. ತಿರುನೆಲ್ವೆಲಿಯಿಂದ ಇದ್ದ ಸ್ಲಿಪ್ ರೈಲನ್ನು ಮಾತ್ರ 20 ಕೋಚ್‌ಗಳ ಸ್ವತಂತ್ರ ರೈಲಾಗಿ ಪರಿವರ್ತಿಸಿ ಈಗ ಕತ್ರಾಕ್ಕೆ ಓಡಿಸಲಾಗುತ್ತಿದೆ.
ಇದರಿಂದಾಗಿ ಮಂಗಳೂರಿನಿಂದ ವೈಷ್ಣೊದೇವಿ ಸೇರಿದಂತೆ ದೇಶದ ಪ್ರಮುಖ ಯಾತ್ರಾಸ್ಥಳಗಳಿಗೆ ಹೋಗುತ್ತಿದ್ದ ಯಾತ್ರಿಗಳಿಗೆ ದೊಡ್ಡ ನಷ್ಟವಾಗಿದೆ. ಈ ಹಿಂದೆ ಮಂಗಳೂರು ಸೆಂಟ್ರಲ್‌ನಿಂದ ಕಾಸರಗೋಡು- ಪಾಲಕ್ಕಾಡ್ ಮೂಲಕ ನವಯುಗ ಎಕ್ಸ್ಪ್ರೆಸ್ ಸಂಚರಿಸುತ್ತಿದ್ದರೆ ಪ್ರಸ್ತುತ ರೂಟ್ ಬದಲಾಯಿಸಿ ಪುನರಾರಂಭಿಸಬೇಕೆಂಬುದು ಅಭಿಯಾನದ ಆಗ್ರಹ. ತಿರುನೆಲ್ವೆಲಿಯಿಂದ ಕತ್ರಕ್ಕೆ ಹೋಗುವ ರೈಲು ಸ್ವತಂತ್ರವಾಗಿ ಓಡುತ್ತಿರುವ ಕಾರಣ ಮಂಗಳೂರು ಸೆಂಟ್ರಲ್- ಶ್ರಿ? ಮಾತಾ ವೈಷ್ಣೊ?ದೇವಿ ಕತ್ರ ನವಯುಗ ಎಕ್ಸ್ಪ್ರೆಸ್ ರೈಲನ್ನು ಮಂಗಳೂರು- ಹಾಸನ- ಮೀರಜ್- ಪುಣೆ- ದಿಲ್ಲಿ ಮಾರ್ಗದಲ್ಲಿ ಓಡಿಸಬೇಕೆಂದು ಒತ್ತಾಯಿಸಲಾಗುತ್ತಿದೆ.
ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ, ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿ ಅವರು ಇಂದು ನಿಧನರಾಗಿದ್ದಾರೆ. ಕಳೆದ ರಾತ್ರಿ ಸಮಾರಂಭವೊಂದರಲ್ಲಿ…
ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಪ್ರೆಸಿಡೆಂಟ್ ಕನ್ವೆನ್ಷನ್ ಹಾಲ್ ಮುಂಭಾಗ…
ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ. ರಿಷಬ್…
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು -ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮೋರಿಗೆ…
ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ದಕ್ಷಿಣ…
ವಸತಿಗೃಹವೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿದ ಆರೋಪಿಗಳಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಬಂಟ್ವಾಳ ಸಜೀಪ ಮುನ್ನೂರು…