ಕೋಡಿ ಸೇತುವೆಯ ಬಳಿ ಸ್ಕೂಟರ್ ಚಪ್ಪಲಿ ಬಿಟ್ಟು ವಿವಾಹಿತ ಮಹಿಳೆಯೋರ್ವಳು ನಾಪತ್ತೆಯಾಗಿದ್ದಾರೆ. ಕುಂದಾಪುರ ವಿಠ್ಠಲವಾಡಿ ನಿವಾಸಿ ಹೀನಾ ಕೌಶರ್(33) ನಾಪತ್ತೆಯಾದ ವಿವಾಹಿತೆ.

ಸೋಮವಾರ ಬೆಳಿಗ್ಗೆ 4 ಗಂಟೆ ಸುಮಾರಿಗೆ ಸೇತುವೆ ಬಳಿ ಚಪ್ಪಲಿ ಸ್ಕೂಟರ್ ಪತ್ತೆಯಾಗಿತ್ತು. ನಾಪತ್ತೆಯಾದ ಮಹಿಳೆಯ ಪತಿ ವಿದೇಶದಲ್ಲಿದ್ದು, ಎರಡು ಮಕ್ಕಳು, ತಾಯಿ ಜೊತೆ ವಾಸವಾಗಿದ್ದರು. ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬರುತ್ತಿದ್ದಾಗ ಆತಂಕಗೊ0ಡ ಮನೆಯವರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು, ಅಗ್ನಿಶಾಮಕ ದಳ ಮತ್ತು ಸ್ಥಳೀಯರಿಂದ ಸೇತುವೆ ಕೆಳಗಿನ ನದಿಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ.

ಇದುವರೆಗೂ ನಾಪತ್ತೆಯಾದ ವಿವಾಹಿತೆಯ ಯಾವುದೇ ಸುಳಿವು ಪತ್ತೆಯಾಗಿಲ್ಲ, ಪತ್ತೆಗಾಗಿ ತೀವ್ರ ಶೋಧ ಮುಂದುವರಿದಿದೆ.



