ಪಾಣೆಮಂಗಳೂರು ಹಳೆಯ ಸೇತುವೆ ಮೂಲಕ ಘನ ವಾಹನಗಳ ಸಂಚಾರ ನಿಷೇಧ ಹೇರಿ ಹಾಕಲಾಗಿದ್ದ ಕಬ್ಬಿಣದ ಕಮಾನ್‌ನೊಳಗೆ ಪಿಕಪ್ ವಾಹನವೊಂದು ಸಿಲುಕಿಕೊಂಡ ಘಟನೆ ನಡೆದಿದೆ.

ಪಾಣೆಮಂಗಳೂರು ಉಕ್ಕಿನ ಸೇತುವೆ ಉಳಿಸುವ ಮತ್ತು ದುರ್ಬಲ ಸೇತುವೆ ಅಪಾಯಕಾರಿಯಾಗಿರುವ ಹಿನ್ನೆಲೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ನಿಷೇಧವನ್ನು ಜಿಲ್ಲಾಡಳಿತ ಅದೇಶ ಹೊರಡಿಸಿ, ಸುಮಾರು ವರ್ಷಗಳ ಬಳಿಕ ಸೇತುವೆಯ ಎರಡು ಭಾಗಗಳಲ್ಲಿ ಕಬ್ಬಿಣದ ಕಮಾನ್ ಅಳವಡಿಸಲಾಗಿತ್ತು. ಅದಾದ ಬಳಿಕ ಕಬ್ಬಿಣದ ಕಮಾನ್ ಗಳನ್ನು ಮರಳು ವಾಹನ ಸಾಗಾಟ ಮಾಡುವ ವಾಹನಗಳು ತೆಗೆದು ಸಂಚಾರ ಮಾಡುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆ, ಅತ್ಯಂತ ಹೆಚ್ಚು ತೂಕದ ಕಬ್ಬಿಣದ ಕಂಬಗಳನ್ನು ಅಳವಡಿಸಿ ಅದರ ಮೇಲೆ ಅಷ್ಟೇ ತೂಕದ ಕಮಾನ್ ಗಳನ್ನು ಹಾಕಲಾಗಿತ್ತು. ಇದೀಗ ಮೀನು ಸಾಗಾಟದ ಪಿಕಪ್ ವಾಹನವೊಂದು ಬಂದು ಗುದ್ದಿದ ರಭಸಕ್ಕೆ ಘನಗಾತ್ರದ ಕಮಾನ್ ಉರುಳಿ ಕೆಲಗೆ ಬಿದ್ದಿದೆ.ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಘಟನೆಯಿಂದ ಒಂದು ಭಾಗದ ಕಮಾನ್ ತೆರವಾಗಿದೆ. ಘಟನೆಯ ಬಗ್ಗೆ ವಿಡಿಯೋ ವೈರಲ್ ಆಗಿದೆ. ವಿಡಿಯೋ ತೆಗೆಯಬೇಡಿ, ವೈರಲ್ ಆಗುತ್ತದೆ ಎಂಬ ಮಾತು ಕೂಡ ಇಲ್ಲಿ ವೈರಲ್ ಆಗಿದೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಟ್ರಾಫಿಕ್ ಪೋಲೀಸರು ತಿಳಿಸಿದ್ದಾರೆ.



