ಕನ್ಯಾನ: ಇಕೋ ಕಾರಿಗೆ ಮಣ್ಣು ತುಂಬಿದ್ದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡ ಘಟನೆ ಉಕ್ಕುಡ ಕನ್ಯಾನ ರಸ್ತೆಯಲ್ಲಿ ನಡೆದಿದೆ. ಕನ್ಯಾನ ಕಡೆಯಿಂದ ಬರುತ್ತಿದ್ದ ಬಾಕ್ಸೆಟ್ ಮಣ್ಣಿನ ಲಾರಿ ಕೇಪಳಗುಡ್ಡೆ ತಿರುವಿನಲ್ಲಿ ದೇಲಂತಬೆಟ್ಟು ಕಡೆಯಿಂದ ಬರುತ್ತಿದ್ದ ಇಕೋ ವಾಹನಕ್ಕೆ ಡಿಕ್ಕಿಯಾಗಿದೆ. ಇದರಿಂದ ಇಕೋ ವಾಹನದ ಬಲ ಭಾಗ ಸಂಪೂರ್ಣ ಜಖಂಗೊಂಡಿದೆ. ಇಕೋ ವಾಹನ ಕನ್ಯಾನ ಮೂಲಕ ಮಂಗಳೂರು ಕಛೇರಿಗೆ ತೆರಳಿದ್ದ ಸಂದರ್ಭ ಈ ಘಟನೆ ನಡೆದಿದೆ. ಸ್ಥಳಕ್ಕೆ 112 ತುರ್ತು ವಾಹನ ಬಂದಿದ್ದು, ವಾಹನಗಳನ್ನು ವಿಟ್ಲ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.



