ಮಧ್ಯ ಪ್ರದೇಶದ ಇಂಧೋರ್ ನವ ಜೋಡಿಯ ಹನಿಮೂನ್ ಪ್ರಕರಣ ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಪ್ರಕರಣ ನಡೆಸ್ತಿರುವ ಪೊಲೀಸರಿಗೆ ಒಂದೊಂದೇ ಅಸಲಿ ವಿಚಾರಗಳು ಗೊತ್ತಾಗುತ್ತಿವೆ. ರಾಜಾ ರಘುವಂಶಿ ಮೇಲೆ ಇಷ್ಟವಿಲ್ಲದೇ ಮನೆಯವರ ಒತ್ತಾಯಕ್ಕೆ ಮದುವೆ ಮಾಡಿಕೊಂಡಿದ್ದ ಸೋನಂ ಮದ್ವೆಯಾದ ಮೂರೇ ದಿನಕ್ಕೆ ರಾಜಾ ರಂಘುವಂಶಿಯನ್ನು ಮುಗಿಸಲು ಪ್ಲಾನ್ ಮಾಡಿದ್ದಳು ಅನ್ನೋದು ಈಗಾಗಲೇ ತಿಳಿದಿದೆ.
ತನಿಖೆಯಲ್ಲಿ ಗೊತ್ತಾಗಿರುವ ಮತ್ತೊಂದು ವಿಚಾರವೆಂದರೆ, ಹನಿಮೂನ್‌ಗೆ ಹೋದಾಗ ಮೆಘಾಲಯದಲ್ಲಿ ತನ್ನ ಸುಪಾರಿ ಪ್ಲಾನ್ ಸಕ್ಸಸ್ ಆಗದಿದ್ರೆ ಪ್ಲಾನ್-ಬಿ ರೆಡಿ ಮಾಡಿದ್ದಳಂತೆ! ಊಟದಲ್ಲಿ ವಿಷ ನೀಡಿ ಪ್ರಾಣ ತೆಗೆಯಲು ಪ್ಲಾನ್ ಮಾಡಿದ್ದಂತೆ.. ಇನ್ನು ಆರೋಪಿ ಸೋನಮ್‌ಗೆ ರಾಜು ಕುಶ್ವಾಹಾ ಜೊತೆ ಅಫೇರ್ ಇರೋದು ಆಕೆಯ ತಂದೆ-ತಾಯಿಗೆ ಮುಂಚೆಯೇ ಗೊತ್ತಿತ್ತು ಎಂದು ಮೃತ ರಾಜಾ ರಘುವಂಶಿ ಸೋದರ ವಿಪಿನ್ ರಘುವಂಶಿ ಮಾಹಿತಿ ನೀಡಿದ್ದಾರೆ. ಸೋನಂ ತನ್ನ ತಾಯಿಯ ಬಳಿ ತಾನು ರಾಜು ಕುಶ್ವಾಹನ ಮದುವೆ ಆಗುತ್ತೇನೆ ಎಂದಿದ್ದಾಳೆ. ಆದರೆ ಇದಕ್ಕೆ ಆಕೆಯ ತಾಯಿ ಒಪ್ಪಿಲ್ಲ. ನಮ್ಮ ಸಮುದಾಯದವರ ಜೊತೆ ಮಾತ್ರವೇ ವಿವಾಹವಾಗಬೇಕು ಎಂದಿದ್ದರಂತೆ. ಅದಕ್ಕೆ ಸೋನಂ ನಾನು ಬೇರೆಯವರನ್ನು ಮದುವೆಯಾಗುತ್ತೇನೆ. ಆದರೆ ನಂತರ ಏನಾದರೂ ಅನಾಹುತವಾದರೆ ಅದಕ್ಕೆ ನಾನು ಹೊಣೆಯಲ್ಲ. ನನ್ನ ಮದುವೆಯಾದ ವ್ಯಕ್ತಿಗೆ ಏನು ಮಾಡುತ್ತೇನೆ ಅಂತಾ ನೋಡುತ್ತೀರಿ ಎಂದು ಎಚ್ಚರಿಕೆ ನೀಡಿದ್ದಳಂತೆ ಎಂದು ಹೇಳಿರುವ ವಿಚಾರವಾಗಿ ವಿಪಿನ್ ರಘುವಂಶಿ ಮಾಹಿತಿ ನೀಡಿದ್ದಾರೆ.
ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿ ಕಾರ್ಯಾಚರಣೆ ನಡೆಸಿ ಅರಬ್ಬಿ ಸಮುದ್ರದಲ್ಲಿ…
ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನಲ್ಲಿ ಇಂದು ಮಧ್ಯಾಹ್ನ ಕೋಕರ್ ಹೈಡ್ರೋ ಟ್ರೀಟರ್ ಘಟಕದಲ್ಲಿ ಘಟನೆ ಸಂಭವಿಸಿದ್ದು, ಘಟನಾ…
ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲು ಪ್ರದೇಶವನ್ನು ಅ.1ರ ಮಧ್ಯರಾತ್ರಿಯಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ವಿಭಾಗೀಯ…
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಲೆಗಳ ಆರಂಭದ ಸಮಯದಲ್ಲಿ ಬದಲಾವಣೆ…
ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ ಏಕ ಜಾತಿ ಧರ್ಮ ಪೀಠದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಪಂಚಾಶತ್…
ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗೆ ಅವಧಿ ಮೀರಿದ ಮಾತ್ರೆಗಳನ್ನು ವಿತರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಆಸ್ಪತ್ರೆ ಆಡಳಿತ…