ಕೆಲವೊಂದು ಭಾವನೆಗಳೇ ಹಾಗೆ ಅವುಗಳಿಗೆ ವಯಸ್ಸು, ಪರಿಸ್ಥಿತಿ, ಒಳ್ಳೆಯದು, ಕೆಟ್ಟದು ಹೀಗೆ ಯಾವುದರ ಪರಿವೂ ಇರುವುದಿಲ್ಲ. ಅಂತಹದೇ ಭಾವನೆಗಳ ಪೈಕಿ ಪ್ರೀತಿಯೂ ಒಂದು. ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಕುಂದಾಪುರ ಮಹಿಳೆ ಹೀನಾ ಕೌಸರ್ ನಾಪತ್ತೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಡೆತ್ ನೋಟ್ ಬರೆದಿಟ್ಟು ಅಸಲಿಗೆ ಆಕೆ ಹೋಗಿದ್ದೆಲ್ಲಿಗೆ..? ತನ್ನ ಚಪ್ಪಲಿ, ಸ್ಕೂಟರ್ ಎಲ್ಲವನ್ನು ನದಿ ತೀರದಲ್ಲಿ ಬಿಟ್ಟು ಆಕೆ ಆಡಿದ ಸೂಸೈಡ್ ಹೈಡ್ರಾಮಾ ಹೇಗಿತ್ತು ಗೊತ್ತಾ?
ಈಕೆ ಕುಂದಾಪುರ ವಿಠ್ಠಲವಾಡಿ ನಿವಾಸಿ 33 ವರ್ಷದ ಹೀನಾ ಕೌಸರ್ ಅನ್ನುವ ಮಹಿಳೆ ತನ್ನಿಬ್ಬರು ಮಕ್ಕಳೊಂದಿಗೆ ತಾಯಿಯ ಮನೆಯಲ್ಲಿ ವಾಸವಿದ್ಲು. ಇನ್ನು ಆಕೆಯ ಗಂಡ ವಿದೇಶದಲ್ಲಿ ಕೆಲ್ಸ ಮಾಡ್ತಾಯಿದ್ದು ಆಗಾಗ ಊರಿಗೆ ಬರ್ತಾ ಇದ್ನನಂತೆ. ಹೀಗೆ ಎಲ್ಲವು ಶಾಂತವಾಗೇ ಇತ್ತು. ಆದ್ರೆ ಜೂನ್ 8 ರಾತ್ರೋರಾತ್ರಿ ಹೀನಾ ಕೌಸರ್ ಮನೆಯಿಂದ ಏಕಾಏಕಿ ನಾಪತ್ತೆಯಾಗಿದ್ಳು . ಗಾಬರಿಕೊಂಡ ಆಕೆಯ ಮನೆಯವರು ಮೇಲಿಂದ ಮೇಲೆ ಆಕೆಗೆ ಕರೆ ಮಾಡಿದ್ರು. ಆದ್ರೆ ಯಾವುದೇ ಪ್ರಯೋಜನವಾಗ್ಲಿಲ್ಲ ಆಕೆಯ ಫೋನ್ ಆಗಲೇ ಸ್ವಿಚ್ ಆಫ್ ಆಗಿತ್ತು. ಇದ್ರಿಂದ ಮತ್ತಷ್ಟು ಗಾಬರಿಕೊಂಡ ಮನೆಯವರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು .
ತಕ್ಷಣವೇ ಪೊಲೀಸರು ಕೂಡ ತನಿಖೆ ಆರಂಭಿಸಿದ್ರು. ಮರುದಿನ ನಸುಕಿನ ಜಾವ ನಾಲ್ಕು ಗಂಟೆಗೆ ಕೋಡಿ ಸೇತುವೆಯ ಬಳಿ ಹೀನಾ ಕೌಸರ್ ಚಪ್ಪಲಿಗಳು ಮತ್ತು ಆಕೆಯ ಸ್ಕೂಟರ್ ಪತ್ತೆಯಾಗಿತ್ತು. ಇದಕ್ಕೆ ಪುಷ್ಟಿ ಎಂಬAತೆ ಆಕೆ ಬರೆದಿದ್ದ ಡೆತ್ ನೋಟ್ ಕೂಡ ಪೋಲೀಸರ ಕೈ ಸೇರುತ್ತದೆ. ಎಲ್ಲವನ್ನು ತಾಳೆ ಹಾಕಿ ನೋಡಿದ ಪೊಲೀಸರು ಹೀನಾ ಕೌಸರ್ ನದಿಗೆ ಹಾರಿ ಸೂಸೈಡ್ ಮಾಡಿರಬಹುದೆಂದು ದೃಢವಾಗಿ ಊಹಿಸಿ ನದಿಯಲ್ಲಿ ಹುಡುಕಾಟ ಕೂಡ ಆರಂಭಿಸಿದ್ರು. ಅಗ್ನಿಶಾಮಕ ದಳದಿಂದ ಕಳೆದೆರಡು ದಿನಗಳಿಂದ ಹೀನ ಕೌಸರ್ ಗಾಗಿ ತೀವ್ರ ಶೋಧ ನಡೆತಿತ್ತು. ಎಲ್ಲವೂ ಮುಗಿಯಿತು ಇನ್ನೇನು ಆಕೆಯ ಮೃತದೇಹ ಸಿಕ್ಕಿಯೇ ಬಿಡುತ್ತದೆ ಎಂಬುವಷ್ಟರಲ್ಲಿ ಇದೀಗ ಈ ಪ್ರಕರಣಕ್ಕೆ ಅನೀರಿಕ್ಷಿತ ಟ್ವಿಸ್ಟ್ ಒಂದು ಸಿಕ್ಕಿದೆ. ಅಸಲಿಗೆ ಹೀನಾ ನದಿಗೆ ಹಾರಿಯೇ ಇಲ್ಲ ಡೆತ್ ನೋಟ್, ಚಪ್ಪಲಿ, ಸ್ಕೂಟರ್ ಎಲ್ಲವನ್ನು ಸಿಗುವಂತೆ ಮಾಡಿ ಸೂಸೈಡ್ ಹೈಡ್ರಾಮಾ ಆಡಿದ್ದಳು. ಅಷ್ಟಕ್ಕೂ ಆಕೆ ಸಾಯುವ ನಾಟಕ ಆಡಿದ್ಯಾಕೆ? ಅನ್ನೋ ಪ್ರಶ್ನೆಗೆ ಮತ್ತದೇ ಉತ್ತರ ಪ್ರೀತಿ. ಹೌದು ಹೀನಾ ಸೂಸೈಡ್ ಡ್ರಾಮಾವಾಡಿ 26 ವರ್ಷದ ಸಾಹಿಲ್ ಅನ್ನುವ ಯುವಕನ ಜೊತೆ ಪರಾರಿಯಾಗಿದ್ದಾಳೆ. ಎರಡು ಮಕ್ಕಳ ತಾಯಿ ಗಂಡ, ಮಕ್ಕಳು ಎಲ್ಲವನ್ನು ಮರೆತು ಹುಚ್ಚು ಪ್ರೀತಿ ಹರಸಿ ತನ್ನಗಿಂತ ಏಳು ವರ್ಷ ಚಿಕ್ಕವನ ಜೊತೆ ಓಡಿಹೋಗಿದ್ದಾಳೆ ಅಂದ್ರೆ ಪ್ರೀತಿಗೆ ನಿಜಕ್ಕೂ ಕಣ್ಣು ಕಾಣೋದಿಲ್ಲ ಅನ್ನೋದು ಮತ್ತೆ ಸಾಬೀತಾಗಿದೆ.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…
ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಅಯ್ಯಪ್ಪ ಮಂದಿರ ಮೊಡಂಕಾಪ್, 2025 - 26 ರ ಅಧ್ಯಕ್ಷರಾಗಿ ಸುನಿಲ್ ಎನ್…
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ನಂದರಬೆಟ್ಟು ಎಂಬಲ್ಲಿ ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಇಶಾಕ್ ಹಾಗೂ ಅಬ್ದುಲ್ಲಾ ಯಾನೆ…
ಪುತ್ತೂರಿನ ಪ್ರಕರಣ ಹಾಗೂ ಕಾರ್ಕಳದ ಅಭಿಷೇಕ್ ಆಚಾರ್ಯ ಅವರ ಆತ್ಮಹತ್ಯೆಗೆ ಸಂಬಂಧಿಸಿದ ವಿಷಯವಾಗಿ ಮಾನ್ಯ ಗ್ರಹಸಚಿವರಾದ ಶ್ರೀ ಜಿ ಪರಮೇಶ್ವರ್…