ಅಹ್ಮದಾಬಾದ್‌ನ ಟ್ರಾಫಿಕ್‌ನಲ್ಲಿ ಸಿಲುಕಿ ಲಂಡನ್ ವಿಮಾನ ತಪ್ಪಿಸಿಕೊಂಡ ಮಹಿಳೆಯೊಬ್ಬರು ಸಾವಿನಿಂದ ಪಾರಾಗಿದ್ದಾರೆ. ಅವರು ಹತ್ತಬೇಕಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ. ವಿಮಾನ ತಪ್ಪಿದ್ದಕ್ಕೆ ನಿರಾಸೆಗೊಂಡಿದ್ದ ಭೂಮಿ, ಇದೀಗ ಇದೇ ತನ್ನ ಜೀವ ಉಳಿಸಿದೆ ಎಂದು ದೇವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇನ್ನು ಟ್ರಾಫಿಕ್ ಅನ್ನು ದಿನನಿತ್ಯ ನಾವು ಬೈತಾ ಇರ್ತೀವಿ.. ಜಾಮ್ ಆದ್ರೆ ಸರಿಯಾದ ಸಮಯಕ್ಕೆ ಹೋಗಿ ತಲುಪೋದಕ್ಕೆ ಆಗಲ್ಲ.. ಟ್ರಾಫಿಕ್‌ನಲ್ಲಿ ಸಿಲುಕಿದ್ರೆ ಜೀವ ಹೋಗುತ್ತೆ ಅಂತ ಗೊಣಗಾಡ್ತೀವಿ. ಟ್ರಾಫಿಕ್ ಜಾಮ್ ಅಂತ ಬೈಕೊಳ್ತಿದ್ದ ಮಹಿಳೆಗೆ.. ಅದೇ ಟ್ರಾಫಿಕ್ ಈಗ ಜೀವ ಉಳಿಸಿದೆ.
ಅಹ್ಮದಾಬಾದ್‌ನ ಭಾರೀ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಭೂಮಿ ಚೌಹಾಣ್‌ಗೆ.. ತಾವು ಹತ್ತಬೇಕಿದ್ದ ಲಂಡನ್ ವಿಮಾನ ತಪ್ಪಿಹೋಗುತ್ತದೆಯೇನೋ ಎಂಬ ಆತಂಕ, ಚಡಪಡಿಕೆ ಇತ್ತು. ಎರಡು ವರ್ಷಗಳ ನಂತರ ಭಾರತಕ್ಕೆ ಬಂದು.. ಮತ್ತೆ ಲಂಡನ್‌ನಲ್ಲಿರುವ ಪತಿಯನ್ನ ಸೇರಬೇಕೆಂಬ ತವಕದಲ್ಲಿದ್ದ ಅವರಿಗೆ, ಆ ಟ್ರಾಫಿಕ್ ತೀವ್ರ ಕಿರಿಕಿರಿ ಎನಿಸಿತ್ತು. ಕೊನೆಗೂ ಏರ್‌ಪೋರ್ಟ್ ತಲುಪಿದಾಗ ತಿಳಿಯಿತು. ಅವರು ಹತ್ತಬೇಕಿದ್ದ ಏರ್ ಇಂಡಿಯಾ ವಿಮಾನ ಎಐ-171 ಟೇಕಾಫ್ ಆಗಿದೆ. ಈ ವಿಚಾರ ಅವರಿಗೆ ಭಾರೀ ನಿರಾಸೆ ತಂದಿತ್ತು.. ಆದರೆ, ಕೆಲವೇ ಗಂಟೆಗಳಲ್ಲಿ ಆ ಹತಾಶೆ, ಅವರ ಪಾಲಿಗೆ ಭಯಾನಕ ಆಘಾತವಾಗಿ ಬದಲಾಯಿತು. ಅವರು ಹತ್ತಬೇಕಿದ್ದ ವಿಮಾನ ಟೇಕಾಫ್ ಆದ ಐದೇ ನಿಮಿಷದಲ್ಲಿ ಪತನಗೊಂಡು, ಅದರಲ್ಲಿ ಪ್ರಯಾಣಿಸುತ್ತಿದ್ದ 241 ಜನರಲ್ಲಿ ಬಹುತೇಕರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ತಿಳಿದು ಒಂದು ಕ್ಷಣ ಮಹಿಳೆ ದಿಕ್ಕೆ ತೋಚದಂತೆ ಮೌನಕ್ಕೆ ಶರಣಾಗಿದ್ದಾರೆ. ಇನ್ನು ಟ್ರಾಫಿಕ್‌ನಿಂದ ಲೇಟ್ ಆಗಿದ್ದಕ್ಕೆ ವಿಮಾನ ಮಿಸ್ ಆಗಿ ಬೇಸರಗೊಂಡಿದ್ದ ಭೂಮಿ ಚೌಹಾಣ್, ಟ್ರಾಫಿಕ್ಕಿನಿಂದಲೇ ಜೀವದಾನ ಸಿಕ್ಕಿದೆ. ನನ್ನ ಗಣಪತಿ ಬಪ್ಪಾ ನನ್ನನ್ನ ಉಳಿಸಿದ ಎನ್ನುವಾಗ ಅವರ ದನಿಯಲ್ಲಿ ಕೃತಜ್ಞತಾ ಭಾವ ಕಾಣ್ತಿತ್ತು. ಆದ್ರೆ ಇದೇ ಅದೃಷ್ಟ ಉಳಿದವರಿಗೆ ಇರಲಿಲ್ಲ ಅನ್ನೋದೇ ನೋವಿನ ಸಂಗತಿಯಾಗಿದೆ.
ಆದಿ ಉಡುಪಿ ಎಪಿಎಂಸಿ ಮಾರುಕಟ್ಟೆಯ ಹಿಂಭಾಗದ ಖಾಸಗಿ ಸ್ಥಳದಲ್ಲಿದ್ದರುವ ಪಾಳುಬಾವಿಯಲ್ಲಿ ಕೊಳೆತಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಮೃತದೇಹ…
ಕಾಪು ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ತಡೆರಹಿತ ಬಸ್ಸೊಂದು ಕಾಪು ಸಾಯಿ ಸರ್ವಿಸ್ ಸ್ಟೇಶನ್ ಬಳಿ ಸ್ಕೂಟಿಯೊಂದಕ್ಕೆ ಹಿಂಬದಿಯಿಂದ…
ಮುಂಡತಿಕ್ಕೋಡುವಿನ ಪಟಾಕಿ ಸಂಗ್ರಹಣಾ ಘಟಕದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 14 ಜನರು ಸಾವನ್ನಪ್ಪಿದ ನಂತರ, ತ್ರಿಶೂರ್ ಪೂರಂ ಉತ್ಸವದ ಪಟಾಕಿ…
ಅಚಾನಕ್ ಆಗಿ ಸುರಿದ ಧಾರಾಕಾರ ಮಳೆಯಿಂದಾಗಿ ಮಂಗಳೂರಿನ ಅತ್ತಾವರ ಬಳಿಯ ಅಯಪ್ಪ ಮಂದಿರದ ಮುಂಭಾಗ ತಡೆಗೋಡೆ ಕುಸಿದು ಬಿದ್ದ ಕಾರಣ…
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಆರೋಪಿಸಿದ್ದಾರೆ.…
ಕಾವಳಪಡೂರು ಗ್ರಾಮದ ಬರ್ಕಟ ಎಂಬಲ್ಲಿ ಪೋಲೀಸ್ ಇಲಾಖೆಯ ಕಚೇರಿ ನಿರ್ಮಾಣಕ್ಕೆ ಮೀಸಲು ಇರಿಸಲಾಗಿದ್ದ ಜಾಗವನ್ನು ಪೋಲೀಸ್ ಮಹಾನಿರ್ದೇಶಕ ಸಲೀಂ ಅವರು…