ವಿಶ್ವಾಸ್ ಕುಮಾರ್ ರಮೇಶ್ ಅನ್ನೋರು ಅಹ್ಮದಾಬಾದ್ ವಿಮಾನ ದುರಂತದಿ0ದ ಪವಾಡ ಸದೃಶ ರೀತಿಯಲ್ಲಿ ಪಾರಾಗಿ ಬಂದಿದ್ದಾರೆ.
ಸದ್ಯ ಅಹ್ಮದಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಪ್ರಧಾನಿ ನರೇಂದ್ರ ಮೋದಿಯವರು ಭೇಟಿಯಾಗಿ ಆರೋಗ್ಯ ವಿಚಾರಸಿದ್ದಾರೆ. ಈ ವೇಳೆ ಘೋರ ದರಂತಕ್ಕೆ ಸಿಲುಕಿ ಕೂದಲೆಳೆ ಅಂತರದಲ್ಲಿ ಜೀವ ಅಪಾಯದಿಂದ ಪಾರಾದ ವಿಶ್ವಾಸ್ ಕುಮಾರ್ ರಮೇಶ್ ಅವರು, ತಮ್ಮ ಅನುಭವಗಳನ್ನು ಹಂಚಿಕೊಳ್ತಿದ್ದಾರೆ. ದೂರದರ್ಶನ ವಾಹಿನಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ನಾನು ಈ ಅಪಾಯದಿಂದ ಹೇಗೆ ಜೀವಂತವಾಗಿ ಬಂದೆ ಅನ್ನೋದೇ ಗೊತ್ತಿಲ್ಲ. ವಿಮಾನವು ಟೇಕ್ ಆಫ್ ಆದ ತಕ್ಷಣ ಸ್ಟಕ್ ಆದಂತೆ ಭಾಸವಾಯಿತು.
ನಂತರ ಗ್ರೀನ್ ಮತ್ತು ವೈಟ್ ಲೈಟ್ ಆನ್ ಆಗಿದೆ. ಪೈಲಟ್‌ಗಳು ನಿಯಂತ್ರಣ ಸಾಧಿಸಿ ವಿಮಾನವನ್ನು ಮೇಲಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದರು. ಆದರೆ ವೇಗದಿಂದ ವಿಮಾನ ಪತನಗೊಂಡಿದೆ. ಇನ್ನೇನು ನಾನು ಸಾಯುತ್ತೇನೆ ಅನ್ಕೊಂಡೆ. ಆದರೆ ನಾನು ಕಣ್ಣು ತೆರೆದಾಗ, ನಾನು ಬದುಕಿರೋದನ್ನು ನೋಡಿದೆ. ನಾನು ನನ್ನ ಸೀಟ್ ಬೆಲ್ಟ್ ತೆರೆದು ಹೊರಬಂದೆ ಆದರೆ ನನ್ನ ಕಣ್ಣೆದುರಲ್ಲೇ ಅಂಕಲ್, ಆಂಟಿ ಹಾಗೂ ಗಗನಸಖಿಯರು ಪ್ರಾಣಬಿಟ್ಟರು. ನಾನು ಭೂಮಿಯ ಹತ್ತಿರಕ್ಕೆ ಬಿದ್ದಿದೆ. ಅದು ಗ್ರೌಂಡ್ ಫ್ಲೋರ್‌ನಲ್ಲಿ ಜಾಗವಿತ್ತು. ಅಲ್ಲಿಂದ ನಾನು ಹೊರಬಂದೆ ಎಂದಿದ್ದಾರೆ.
ಬಸ್‌ನಿಂದ ಇಳಿದು ರಸ್ತೆ ಬದಿಗೆ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕೂಲಿ ಕಾರ್ಮಿಕನೊಬ್ಬ ಸ್ಥಳದಲ್ಲೇ…
ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದ ಆರೋಪಿಗಳಿಬ್ಬರ ಮೃತದೇಹಗಳು ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಚಾರ್ಸಲ್ ಪ್ರದೇಶದ…
ಉಡುಪಿ ನಗರದ ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್‌ವೊಂದು ಕಳವಾಗಿರುವ ಘಟನೆ ಸೆ.29ರಂದು ಬೆಳಕಿಗೆ ಬಂದಿದ್ದು,…
ಮಂಗಳೂರು ವಿಶ್ವವಿದ್ಯಾನಿಲಯದ 16 ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು 2026-27ನೇ ಶೈಕ್ಷಣಿಕ ಸಾಲಿನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೋರ್ಸ್‌ಗಳನ್ನು ಮುಂದುವರಿಸಲು ಅಗತ್ಯವಿರುವಷ್ಟು ವಿದ್ಯಾರ್ಥಿಗಳು…
ಮಂಗಳೂರು ಮತ್ತು ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕ ಭಾಗದಲ್ಲಿ ಕರ್ನಾಟಕ ಹೈಕೋರ್ಟ್‌ನ ಸರ್ಕ್ಯೂಟ್ ಬೆಂಚ್ ಅಥವಾ ಶಾಶ್ವತ ಪೀಠ ಸ್ಥಾಪಿಸುವ…
ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಪ್ರಯಾಣಿಸುತ್ತಿದ್ದ ಕಾರಿಗೆ ಗೂಡ್ಸ್ ಆಟೋ ರಿಕ್ಷಾ ಡಿಕ್ಕಿಯಾಗಿ, ತೀವ್ರವಾಗಿ ಗಾಯಗೊಂಡಿದ್ದ ಆಟೋ…