ತನ್ನ ಖಾಸಗಿ ಅಂಗವನ್ನು ತೋರಿಸುತಿದ್ದ ವ್ಯಕ್ತಿಗೆ ಸಾರ್ವಜನಿಕರಿಂದ ಗೂಸಾ ಬಿದ್ದಿದೆ.

ಮಂಗಳೂರು ರಾಜಾಜಿ ಪಾರ್ಕ್ನಲ್ಲಿ ಈ ಘಟನೆ ನಡೆದಿದ್ದು, ರಾಜಾಜಿ ಪಾರ್ಕ್ ಅಂಡರ್ ಪಾಸ್‌ನಲ್ಲಿ ಮಹಿಳೆಯರಿಗೆ ಈ ಕಾಮುಕ ಕ್ರಿಮಿ ತನ್ನ ಖಾಸಗಿ ಅಂಗವನ್ನು ತೋರಿಸಿ ವಿಕೃತಿ ಮೆರೆಯುತ್ತಿದ್ದ. ಲಜ್ಜೆಗೆಟ್ಟ ಕಾಮುಕನನ್ನ ಉತ್ತರ ಭಾರತದ ಮೂಲದ ಅಕ್ರಮ್ ಪಾಶ ಎಂದು ಗುರುತಿಸಲಾಗಿದೆ. ಈತನ ಮೀತಿಮೀರಿದ ಹುಚ್ಚಾಟಕ್ಕೆ ಸಾರ್ವಜನಿಕರು ಗೂಸಾ ಕೊಟ್ಟಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



