ಜನ ಮನದ ನಾಡಿ ಮಿಡಿತ

Advertisement

ಹುಣಸೂರು: ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ ಐದನೇ ರ‍್ಯಾಂಕ್ ರಾಜ್ಯಕ್ಕೆ ಮೊದಲನೇ ರ‍್ಯಾಂಕ್ ಪಡೆದ ಹುಣಸೂರಿನ ಎಸ್ ಶ್ರೇಯಸ್

ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ ಐದನೇ ರ‍್ಯಾಂಕ್ ರಾಜ್ಯಕ್ಕೆ ಮೊದಲನೇ ರ‍್ಯಾಂಕ್ ಪಡೆದ ನಮ್ಮ ಹುಣಸೂರಿನ ಕುವರ ಎಸ್ ಶ್ರೇಯಸ್ ರನ್ನು ಸತ್ಯಪ್ಪ ಹಾಗೂ ಗೌರಿಶಂಕರ್ ರವರ ನೇತೃತ್ವದಲ್ಲಿ ಇಂದು ಮಧು ಗ್ರೂಪ್ಸ್ ಹೂಟಗಳ್ಳಿ ಕಚೇರಿಯಲ್ಲಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸತ್ಯಪ್ಪ ರವರು ಮಾತನಾಡಿ ಕೇಂದ್ರ ಲೋಕಸೇವಾ ಯುಪಿಎಸ್ ಸಿ ನಡೆಸುವ ಕೇಂದ್ರೀಯ ಪೊಲೀಸ್ ಶಶಸ್ತ್ರ ಪಡೆ ಪರೀಕ್ಷೆ 2024ರಲ್ಲಿ ಸಿಎಪಿಎಫ್ ಎಸ್ ಶ್ರೇಯಸ್ ದೇಶಕ್ಕೆ 5ನೇ ರ‍್ಯಾಂಕ್ ಪಡೆದಿದ್ದು ಕರ್ನಾಟಕ ರಾಜ್ಯಕ್ಕೆ ಮೊದಲನೇ ರ‍್ಯಾಂಕ್ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದು ಇವರು ನಮ್ಮ ಹುಣಸೂರು ತಾಲೂಕಿನವರಾಗಿದ್ದು ಕಸಬಾ ಹೋಬಳಿ ಮರದೂರು ಗ್ರಾಮದ ಎಚ್‌ಎಸ್ ಸಿದ್ದರಾಮೇ ಗೌಡ ಹಾಗೂ ಸುಜಾತಾ ದಂಪತಿಗಳ ಪುತ್ರರಾಗಿದ್ದಾರೆ. ಈ ಹುಡುಗನ ತಂದೆ ಎಚ್‌ಎಸ್ ಸಿದ್ದರಾಮೇಗೌಡ ರವರು, ಇವರು ರೈತ ಕುಟುಂಬಕ್ಕೆ ಸೇರಿದವರಾಗಿರುತ್ತಾರೆ. ತಾಲೂಕಿಗೆ ಕೀರ್ತಿ ತಂದ ಎಸ್ ಶ್ರೇಯಸ್ ರವರನ್ನು ಆದರ್ಶವಾಗಿಟ್ಟುಕೊಂಡು ವಿದ್ಯಾರ್ಥಿಗಳು ತಮ್ಮ ಓದಿನೊಂದಿಗೆ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ತಮ್ಮ ತಂದೆ ತಾಯಿಗಳಿಗೆ ಹೆಮ್ಮೆ ತರುವುದಲ್ಲದೆ ತಮ್ಮ ಜೀವನವನ್ನು ಯಶಸ್ವಿಗೊಳಿಸಿಕೊಳ್ಳಬಹುದು ಎಂದು ಉತ್ತಮ ಭವಿಷ್ಯದ ನಿರೀಕ್ಷೆಯಲ್ಲಿರುವ ವಿದ್ಯಾವಂತ ಯುವಕ ಯುವತಿಯರಿಗೆ ಸಲಹೆ ನೀಡಿದ್ದಾರೆ. ಗೌರಿಶಂಕರ್ (ಮಧು ಬಿಳಿಕೆರೆ) ಅವರು ಮಾತನಾಡಿ ಗ್ರಾಮೀಣ ಪ್ರದೇಶದ ರೈತರ ಮಗ ಯುಪಿಎಸ್ಸಿಯಲ್ಲಿ ರ‍್ಯಾಂಕ್ ಬಂದಿರುವುದು ಒಂದು ಹೆಮ್ಮೆಯ ವಿಷಯ. ವಿದ್ಯಾರ್ಥಿಗಳು ಇವರ ಆದರ್ಶದಲ್ಲಿ ಮುಂದುವರಿಯಬೇಕೆ0ದು ಹೇಳಿದರು. ಈ ಸಂದರ್ಭದಲ್ಲಿ ಲೋಕೇಶ್ ಅಸಿಸ್ಟೆಂಟ್ ಡಿಫೆನ್ಸ್ ಎಸ್ಟೇಟ್ ಆಫೀಸರ್, ಲೋಕೇಶ್ ಉದ್ಯಮಿಗಳು, ಮೋಹನ್ ಮಾಜಿ ಸೈನಿಕರು, ಶಿವಶಂಕರ್ (ಮನು), ಶಿವರಾಜೆ ಗೌಡ ನಿವೃತ್ತ ಡೆಪ್ಯುಟಿ ತಹಸಿಲ್ದಾರ್, ವಿಷ ಕಂಠೇಗೌಡ, ಮಂಜುನಾಥ ಬ್ರಿಕ್ಸ್ ಮಾಲೀಕರು ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..!

ವ್ಯಕ್ತಿಯೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ…!

ವಿ ಡಿ ಸತೀಶನ್ ಅವರನ್ನು ಕಾಸರಗೋಡಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು…!

ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ…!

ಬಂಟ್ವಾಳ: ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್ (65) ಹೃದಯಾಘಾತದಿಂದ ನಿಧನ!

ಮಂಗಳೂರು: ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ!

ಮಂಗಳೂರು: ಪಚ್ಚನಾಡಿ ರೈಲ್ವೇ ಹಳಿಯಲ್ಲಿ ಯುವಕನ ಮೃ*ತದೇಹ ಪತ್ತೆ; ಸಂಶಯಾಸ್ಪದ ಸಾ*ವು..!

ಬಂಟ್ವಾಳ: ಪಾಣೆಮಂಗಳೂರು ಸಮೀಪ ನೇತ್ರಾವತಿ ನದಿಯಲ್ಲಿ ಮೃ*ತದೇಹ ಪ*ತ್ತೆ….!

ಮಂಗಳೂರು: ಸಂಹಿತೆಗಳ ಜಾರಿಯಿಂದ ಯೂನಿಯನ್ ಮುಕ್ತ ಭಾರತವಾಗುವ ಅಪಾಯವಿದೆ- ಫಣೀಂದ್ರ ಕೆ ಎಚ್ಚರ!

error: Content is protected !!