ಉಡುಪಿಯಲ್ಲಿ ಖಾಸಗಿ ಬಸ್‌ಗಳ ಹುಚ್ಚಾಟ ಮಿತಿಮೀರಿದೆ. ಇದಕ್ಕೆ ಸಾಕ್ಷಿಯೆಂಬಂತೆ ಕುಂದಾಪುರದಿಂದ ಉಡುಪಿಗೆ ಬರುತ್ತಿದ್ದ `ದುರ್ಗಾಂಬ’ ಹೆಸರಿನ ಖಾಸಗಿ ಬಸ್ ಚಾಲಕನೋರ್ವ, ಬನ್ನಂಜೆ ಬಳಿ ಏಕಾಏಕಿ ಬ್ರೇಕ್ ಹಾಕಿದ್ದಾನೆ.

ಪರಿಣಾಮ ಬಸ್ಸ್ 18 ಡಿಗ್ರಿ ತಿರುಗಿ ನಿಂತಿದೆ. ಇದರಿಂದ ಬಸ್ಸಿನಲ್ಲಿದ್ದ ಹಿರಿಯರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲಾ ಪ್ರಯಾಣಿಕರು ತೀವ್ರ ಆತಂಕಕ್ಕೊಳಪಟ್ಟು ಕಿರುಚಾಡಿದ್ದಾರೆ. ಇಷ್ಟೆಲ್ಲಾ ಆದ್ರೂ ಚಾಲಕ ತನ್ನ ತಪ್ಪಿನ ಅರಿವಿಲ್ಲದಂತೆ, ಏನೂ ಅಗೇ ಇಲ್ಲವೆಂಬಂತೆ ಬಸ್ಸನ್ನು ಮತ್ತೆ ಅತಿ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ. ಅಷ್ಟಕ್ಕೆ ನಿಲ್ಲಸದೇ ಮುಂದೆ ಸಾಗಿ ರಾಂಗ್ ಸೈಡ್‌ನಲ್ಲಿ ಚಲಿಸಿ ಅಪಾಯಕಾರಿಯಾಗಿ ಯುಟರ್ನ್ ಪಡೆದು ತನ್ನ ದಾರಿಯಲ್ಲಿ ಮುಂದುವರಿದಿದ್ದಾನೆ. ಚಾಲಕನ ಈ ಬೇಜವಾಬ್ದಾರಿ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಸಾರ್ವಜನಿಕರಿಗೆ ಪೊಲೀಸರು ಒತ್ತಾಯಿಸಿದ್ದಾರೆ.



