ಯುವ ಬಂಟರ ಸಂಘ ಪುತ್ತೂರು ತಾಲೂಕು ಸಮಿತಿದ ಆಶ್ರಯದಲ್ಲಿ ಬಂಟ ದಿನಾಚರಣೆ ಪ್ರಯುಕ್ತ ಜುಲೈ 23 ರಂದು ತುಳುನಾಡ ಬಂಟೆರೆ ಪರ್ಬ 2023 ಎನ್ನುವ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಇದರಲ್ಲಿ ದಕ್ಷಿಣ ಕನ್ನಡ, ಕಾಸರಗೋಡು ಮತ್ತು ಉಡುಪಿ ಜಿಲ್ಲೆಯ ಆಯ್ದ 8 ತಂಡಗಳು ಭಾಗವಹಿಸಿತು. ಇದರಲ್ಲಿ ತುಳುನಾಡು ಮತ್ತು ಬಂಟ ಸಂಸ್ಕೃತಿಯ ಪ್ರದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು.

ಈ ಕಾರ್ಯಕ್ರಮದಲ್ಲಿ ನಮ್ಮೂರಿನ ಹೆಮ್ಮೆಯ ಕರ್ನಾಟಕ ರಾಜ್ಯದ ಹೈಕೋರ್ಟ್ ನ್ಯಾಯಾಧೀಶರು ಸವಣೂರು ವಿಶ್ವಜೀತ್ ಶೆಟ್ಟಿಯವರು ಬಂದು ಸಮಾಜದ ಪರವಾಗಿ ಗೌರವ ಸ್ವೀಕರಿಸಿದರು.
ಕಾರ್ಯಕ್ರಮನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರು ಅಜಿತ್ ರೈ ಮಾಲಾಡಿ ಉದ್ಘಾಟಿಸಿದರು. ಪುತ್ತೂರಿನ ಜನಪ್ರಿಯ ಶಾಸಕರು ಅಶೋಕ್ ಕುಮಾರ್ ರೈ, ಮುಂಬಯಿ ಹೇರಂಭಾ ಗ್ರೂಪ್ ನ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ, ಇಂಟರ್ ನ್ಯಾಶನಲ್ ಸಿವಿಲ್ ಸರ್ವೆಂಟ್ ನಿತ್ಯಾನಂದ ಶೆಟ್ಟಿ, ಮುಂಬಯಿ ನಿವೃತ್ತ ಡೆಪ್ಯುಟಿ ಕಮೀಷನರ್ ಶಾರ್ಪ್ ಶೂಟರ್ ಖ್ಯಾತಿಯ ಪ್ರಕಾಶ್ ಭಂಡಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ಮಹಾನಗರ ಪಾಲಿಕೆಯ ಜಂಟೀ ಆಯುಕ್ತರು ವಾಣಿ ಎಸ್ ಆಳ್ವ, ಗುಣರಂಜನ್ ಶೆಟ್ಟಿ, ಪ್ರಕಾಶ್ ರೈ ದೇರ್ಲ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಮಲ್ಲಿಕಾ ಪ್ರಸಾದ್ ಸಮಾರೋಪ ಸಮಾರಂಭದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷರು ಕಾವು ಹೇಮನಾಥ್ ಶೆಟ್ಟಿಯವರು ಮತ್ತು ಹೀಗೆ ಗಣ್ಯಾತಿ ಗಣ್ಯರು ಕಾರ್ಯಕ್ರಮದಲಿ ಉಪಸ್ಥಿತರಿದ್ದರು.

ಖ್ಯಾತ ನಿರೂಪಕ ನಿತೇಶ್ ಶೆಟ್ಡಿ ಎಕ್ಕಾರ್ ಈ ಕಾರ್ಯಕ್ರಮದ ಮುಖ್ಯ ನಿರೂಪಕರಾಗಿ ಭಾಗವಹಿಸಿದರು.
ಈ ಕಾರ್ಯಕ್ರಮಗಳ ಮಧ್ಯೆ ನೋಡುಗರನ್ನು ರಂಜಿಸಲು ನಮ್ಮೂರಿನ ಬಂಟ ತಾರೆಯರಾದ ವಿಜಯಕುಮಾರ್ ಕೋಡಿಯಾಲ್ ಬೈಲ್, ಸರ್ಕಸ್ ಚಿತ್ರದ ಹೀರೋ ರೂಪೇಶ್ ಶೆಟ್ಟಿ, ಹೀರೋಯಿನ್ ರಚನಾ ಶೆಟ್ಟಿ, ವಿಲನ್ ಯಶ್ ಶೆಟ್ಟಿ, ದೀಪಕ್ ರೈ ಪಾಣಾಜೆ, ಸುಂದರ್ ರೈ ಪಾಣಾಜೆ. ಚಲನ ಚಿತ್ರ ಹಾಡುಗಾರ ಸಂಗೀತ ನಿರ್ಧೇಶಕ ಅರ್ಜುನ್ ಜನ್ಯನ ಶಿಷ್ಯ ನಿಶಾನ್ ರೈ ಮಠಂತಬೆಟ್ಟು, ಸಂಗೀತ ನಿರ್ದೇಶಕ ಪ್ರಸಾದ್, ಕಬಡ್ಡಿ ಆಟಗಾರ ಪ್ರಶಾಂತ್ ರೈ ಸೇರಿದಂತೆ ಹಲವಾರು ಮಂದಿ ಸಾಧಕರು ಸೇರಿಕೊಂಡರು.
ಕಳೆದ 10 ವರ್ಷಗಳಿಂದ ಬಂಟ ದಿನಾಚರಣೆ ಕಾರ್ಯಕ್ರಮ ನಡೆಯುತ್ತಾ ಬಂದಿದೆ. ಬೆಳಿಗ್ಗೆ ಗಣಹೋಮ ಸತ್ಯನಾರಾಯಣ ಪೂಜೆ, ನಂತರ ಸಾಂಸ್ಕೃತಿಕ ಕಾರ್ಯಕ್ರಮ, ಸಭೆ. ಮಧ್ಯಾಹ್ನ ಮುಗೀತಿತ್ತು. ಈ ಬಾರಿ ಜುಲೈ 22 ಶನಿವಾರ ಬೆಳಿಗ್ಗೆ ಗಣಹೋಮ ಮತ್ತು ಸತ್ಯನಾರಾಯಣ ಪೂಜೆ ನಡೆಯಿತು. ಜುಲೈ 23 ರಂದು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಸಂಪೂರ್ಣ ಮನರಂಜನಾ ಕಾರ್ಯಕ್ರಮ ನಡೆಯಿತು. ಇದರೊಂದಿಗೆ ಸ್ಥಳೀಯ ಪ್ರತಿಭೆಗಳ ಪ್ರದರ್ಶನವೂ ನಡೆಯಿತು.





















