ಕೃಷಿಕರ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ದೊರಕುವ ಏಕೈಕ ಮಾರುಕಟ್ಟೆ ಸಂತೆಯಾಗಿದ್ದು, ತುಳುನಾಡಿನ ತುಳುವರ ಬದುಕಿನ ಜೊತೆಯಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದ್ದಾರೆ.

ಇವರು ಬಿ.ಸಿ.ರೋಡಿನಲ್ಲಿ ತುಳುಕೂಟ ಬಂಟ್ವಾಳ ಇದರ ಆಶ್ರಯದಲ್ಲಿ ಆಯೋಜನೆಗೊಂಡಿರುವ “ತುಳುವೆರೆನ ತುಳುನಾಡ ಸಂತೆ” ಕುಕ್ಕು ಪೆಲಕಾಯಿದ ಒಟ್ಟು ತುಳು ಸಾಹಿತ್ಯ ಸಾಂಸ್ಕೃತಿಕ ರಂಗ್ ಮಳೆಗಾಲದ ವಿಶೇಷ ಕಾರ್ಯಕ್ರಮವಾಗಿ ಕೃಷಿಗೆ ಪ್ರಾಧಾನ್ಯತೆ, ಸಾಹಿತ್ಯಕ್ಕೆ ಒತ್ತು, ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮದಲ್ಲಿ ಹಲಸಿನ ಹಣ್ಣುನ್ನು ತುಂಡು ಮಾಡಿ ಸಂತೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ್ರು. ತುಳು ಭಾಷಾ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ತೃಪ್ತಿ ,ರಮ್ಯ ಶ್ರೀ, ಯಶಸ್ವಿನಿ ಲತೇಶ್ ಬಿ. ವಿದ್ಯಾರ್ಥಿಗಳಿಗೆ ಗೌರವ ನೀಡಿ ಗೌರವಿಸಲಾಯಿತು.



