ದಿ ಪುತ್ತೂರು ಕ್ಲಬ್ ವತಿಯಿಂದ ಬಾಬ್ ಕಾರ್ಡ್ ಸಹಕಾರದೊಂದಿಗೆ ಆಯೋಜಿಸುವ ಮಿನಿ ಮ್ಯಾರಥಾನ್ ಓಟ `ಬಲೆ ಬಲಿಪುಗ’ ಜುಲೈ 6ರಂದು ಪುತ್ತೂರಿನಲ್ಲಿ ನಡೆಯಲಿದೆ ಎಂದು ದಿ ಪುತ್ತೂರು ಕ್ಲಬ್ ಅಧ್ಯಕ್ಷ ಡಾ.ದೀಪಕ್ ರೈ ಹೇಳಿದ್ದಾರೆ.

ಇವರು ಪುತ್ತೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನಡೆಯುವ ಮ್ಯಾರಥಾನ್ ಓಟ 21ಕಿ.ಮೀ. ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ. ಮ್ಯಾರಥಾನ ಓಟದ ಅಂಗವಾಗಿ ಜು.22ರಂದು ಬೆಳಿಗ್ಗೆ 6.30 ಕ್ಕೆ ಪ್ರಿ-ರನ್ ಕಿಲ್ಲೆ ಮೈದಾನದಿಂದ ಮುಖ್ಯ ರಸ್ತೆಯಾಗಿ ಫಿಲೋಮಿನಾ ಕಾಲೇಜಿನ ತನಕ ಮಾಡಲಿದ್ದೇವೆ ಎಂದು ಮಾಹಿತಿಯನ್ನು ನೀಡಿದ್ದಾರೆ.



