ಚಕ್ರವರ್ತಿ ಸೂಲಿಬೆಲೆ ಮಾತಿನ ಮೇಲೆ ನಿರ್ಬಂಧ ಹೇರಲಾಗಿದೆ. ಸೂಲಿಬೆಲೆ ನೆಲ ಜಲ ಪರಿಸರ ಅರಣ್ಯ ನೀರಿನ ಬಗ್ಗೆ ಕಾಳಜಿರುವವರು.

ರಾಷ್ಟ್ರೀಯ ವಿಚಾರದ ಬಗ್ಗೆ ಸ್ಪಷ್ಟವಾದ ನಿಲುವಿರುವ ವ್ಯಕ್ತಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಇವರು ಉಡುಪಿಯಲ್ಲಿ ಮಾತನಾಡಿ, ಮಾತನ್ನು ನಿರ್ಬಂಧಿಸುವ ದುಸ್ಸಾಹಸಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಪಾಕಿಸ್ತಾನಕ್ಕೆ ಜೈ ಎಂದವರ ನಡುವೆ ಸೂಲಿಬೆಲೆ ದೇಶಕ್ಕೆ ಜೈ ಅನ್ನುವ ವ್ಯಕ್ತಿ. ಜನತಂತ್ರ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿ ಅಭಿಪ್ರಾಯ ಬಿನ್ನಾಭಿಪ್ರಾಯವನ್ನು ಸ್ವಾಗತಿಸಬೇಕು. ಯಾರು ಆರೋಪ ಮಾಡಿದ್ರೋ ಅವರು ಅದಕ್ಕೆ ಸ್ಪಷ್ಟನೆ ಕೊಡಬಹುದು ಎನ್ನುವ ಮೂಲಕ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ತಿರುಗೇಟು ಕೊಟ್ಟಿದ್ದಾರೆ.



