ಕಾಂಗ್ರೆಸ್ ಸರಕಾರ ಭಾಷಣಕಾರರನ್ನು ಟಾರ್ಗೆಟ್ ಮಾಡುತ್ತಿದೆ. ಡಿಸಿ, ಎಸ್‌ಪಿಗಳ ಮೂಲಕ ಹಿಂದುಪರ ಸಂಘಟನೆಗಳ ವಿರುದ್ಧ ನೋಟೀಸ್ ಅಸ್ತ್ರವನ್ನ ಪ್ರಯೋಗ ಮಾಡ್ತಾ ಇದೆ ಎಂಬ ವಿಚಾರ ಸಾರ್ವಜನಿಕ ವಲಯಗಳಲ್ಲಿ ಭಾರೀ ಚರ್ಚೆಯಾಗ್ತಯಿದೆ.

ಉಡುಪಿಯ ಶ್ರೀಕಾಂತ್ ಶೆಟ್ಟಿಗೆ ಮೂರು ತಿಂಗಳು ಬಾಗಲಕೋಟೆ ಜಿಲ್ಲೆಗೆ ನಿರ್ಬಂಧ ಹೇರಲಾಗಿದೆ. ಛತ್ರಪತಿ ಶಿವಾಜಿ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹಿಂದು ಜಾಗರಣ ವೇದಿಕೆ ಮುಖಂಡ ಶ್ರೀಕಾಂತ್ ಶೆಟ್ಟಿಯವರಿಗೆ ಆಹ್ವಾನವಿತ್ತು. ಆದ್ರೆ ಇದೀಗ ಜಿಲ್ಲಾಡಳಿತ ಭಾಷಣ ಮೂಲಕ ಕೋಮು ಸಾಮರಸ್ಯ ಕದಡುವ ಕಾರಣ ನೀಡಿ ಶ್ರೀಕಾಂತ್ ಶೆಟ್ಟಿಗೆ ನಿರ್ಬಂಂಧ ಹೇರಿದೆ.



