ಮೈದುನನಿಂದ ಹಲ್ಲೆಗೊಳಗಾಗಿ ತಾಯಿ ಮತ್ತು ಮಕ್ಕಳು ಆಸ್ಪತ್ರೆ ಸೇರಿರುವ ಘಟನೆ ಹುಣಸೂರು ತಾಲ್ಲೂಕಿನ ಪಕ್ಷಿರಾಜಪುರ ಗ್ರಾಮದಲ್ಲಿ ನಡೆದಿದೆ. ಪಕ್ಷಿರಾಜಪುರ ಗ್ರಾಮದ ಮಹಿಳೆ ನಯನ ಮತ್ತು ಮಕ್ಕಳು ಭಾಗ್ಯರಾಜು, ಮಿಲನ ಎಂಬುವರ ಮೇಲೆ ಮೈದುನ ಕುಮಿಂದ್ರ ಮತ್ತು ಕುಟುಂಬದವರು ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೆ ಒಳಗಾದ ಮಹಿಳೆ ತಿಳಿಸಿದ್ದಾರೆ.

ಈ ಹಿಂದೆಯೂ ಹಲ್ಲೆ ಮಾಡಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ, ಪದೆ ಪದೆ ಹಲ್ಲೆ ಮಾಡುತ್ತಲೇ ಇದ್ದಾನೆ. ನಮಗೆ ಯಾವುದೇ ರೀತಿಯ ಸೂಕ್ತ ನ್ಯಾಯ ದೊರೆಯುತ್ತಿಲ್ಲವೆಂದು ಕಣ್ಣೀರು ಹಾಕಿದ್ದಾರೆ. ಪತಿ ಪ್ರೇಮ್ ನಾಥ್ ಮೂರು ವರ್ಷಗಳ ಹಿಂದೆ ಬೇರೊಂದು ಮಹಿಳೆಯನ್ನು ಮದುವೆಯಾಗಿ ಮನೆ ಬಿಟ್ಟು ಹೋಗಿದ್ದಾನೆ. ನಂತರ ಆಗಾಗ ಮನೆಗೆ ಬಂದು ಹಿರಿಯ ಪತ್ನಿ ನಯನಗೆ ಮನೆ ಬಿಟ್ಟು ಹೋಗು ಎಂದು ಕಿರುಕುಳ ನೀಡುತ್ತಿದ್ದನಂತೆ. ಇದಕ್ಕೆ ಒಪ್ಪದ ನಯನ ಮತ್ತು ಮಕ್ಕಳ ಮೇಲೆ ಹಲ್ಲೆ ಮಾಡಿ, ತಲೆ ಮರಿಸಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಚಿಕ್ಕಪ್ಪ ಕುಮಿಂದ್ರನಿಂದ ತುಂಬಾನೆ ತೊಂದರೆಯಾಗಿದ್ದು, ಎರಡು ದಿನಗಳ ಹಿಂದೆ ಈ ಕಿರುಕುಳಕ್ಕೆ ಬೆಸತ್ತು ಆತ್ಮ ಹತ್ಯೆಗೂ ಪ್ರಯತ್ನಿಸಿದ್ದೇವು ಎಂದು ನೊಂದ ಮಹಿಳೆಯ ಮಕ್ಕಳು ಕಣ್ಣೀರು ಹಾಕಿದ್ದಾರೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.



