ಕಾರಣೀಕ ಕ್ಷೇತ್ರವಾದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೇವಸ್ಥಾನದಲ್ಲಿ ಜುಲೈ ತಿಂಗಳ 22 ರ ಆದಿತ್ಯವಾರದಂದು ಈ ವರ್ಷದ ಅತೀ ಹೆಚ್ಚು ಅಗೆಲು ಸೇವೆ ನಡೆದಿದೆ ಎಂದು ದೈವಸ್ಥಾನದ ಮುಖಾಂತರ ಅಧಿಕೃತ ಮಾಹಿತಿ ಲಭ್ಯವಾಗಿದೆ.

ಒಟ್ಟು 3871 ಅಗೆಲು ಸೇವೆ ನಡೆದಿದೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಕೂಡ ಜೂನ್ ತಿಂಗಳಿನಿAದ ಅಗಸ್ಟ್ ತಿಂಗಳ ವರೆಗೆ ಇದೇ ಮಾದರಿಯಲ್ಲಿ ಅಗೆಲು ಸೇವೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ವರ್ಷ ಜೂನ್ 2 ರಂದು 3908 ಅಗೆಲು ಸೇವೆ ನಡೆದಿತ್ತು. ಆಟಿ ತಿಂಗಳಲ್ಲಿ ಪ್ರತಿ ವರ್ಷ ಅತೀ ಹೆಚ್ಚು ಅಗೆಲು ಸೇವೆಗಳು ನಡೆಯುತ್ತದೆ ಎಂದು ಹೇಳಿದ್ದಾರೆ. ವಾರದ ಮೂರು ದಿನ ಅಂದರೆ ಆದಿತ್ಯವಾರ, ಮಂಗಳವಾರ ಮತ್ತು ಶುಕ್ರವಾರ ಮೂರು ದಿನಗಳ ಕಾಲ ಇಲ್ಲಿ ಅಗೆಲು ಸೇವೆ ನಡೆಯುತ್ತದೆ.



