ಕನ್ನಡಿಗ ಕೆ.ಎಲ್.ರಾಹುಲ್ ಮತ್ತೊಮ್ಮೆ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಸದ್ಯ ಇಂಗ್ಲೆಂಡ್‌ನ ಲೀಡ್ಸ್ನಲ್ಲಿ ಭಾರತ ತಂಡವು ಟೆಸ್ಟ್ ಪಂದ್ಯವನ್ನು ಆಡ್ತಿದೆ.

ಮೊದಲ ಟೆಸ್ಟ್ ಆಡ್ತಿರುವ ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ತಂಡಗಳಿಗೆ ನಿನ್ನೆ ಮೂರನೇ ದಿನದ ಕದನ ಕೂಡ ಇತ್ತು. ಪಂದ್ಯದ ವೇಳೆ ಕೆಎಲ್ ರಾಹುಲ್ ಬಹಳಷ್ಟು ಸುದ್ದಿಯಾಗಿದ್ದಾರೆ. ಮಳೆಯ ಹಿನ್ನೆಲೆಯಲ್ಲಿ ಪೆವಿಲಿಯನ್‌ಗೆ ಆಟಗಾರರು ಹೋಗುತ್ತಿದ್ರು. ಆಗ ರಾಹುಲ್, ಬ್ಯಾಟ್ ಮಳೆಯಿಂದ ನೆನೆಯಬಾರದು ಅನ್ನೋ ಕಾರಣಕ್ಕೆ ತಮ್ಮ ಜರ್ಸಿ ಒಳಗೆ ಮುಚ್ಚಿಕೊಂಡು ಹೋಗಿದ್ದಾರೆ.ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.



