ಉಡುಪಿ ಜಿಲ್ಲೆಯಲ್ಲಿ ಉಚಿತ ಸಹಜ ಯೋಗ ಧ್ಯಾನೋತ್ಸವ ಜೂ.25ರಿಂದ 29ರವರೆಗೆ ನಡೆಯಲಿದೆ ಎಂದು ಪದ್ಮಾ ಗಂಗಾಧರ್ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜೂ.25ರಂದು ಬೆಳಗ್ಗೆ 9.30ರಿಂದ ಸಂಜೆ 4ರವರೆಗೆ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ, ಜೂ.26ರಂದು ಶ್ರೀಕೃಷ್ಣ ಮಠದ ರಾಜಾಂಗಣ, ಸಂಜೆ 6ರಿಂದ 9ರವರೆಗೆ ಬೈಲೂರು ಮಹಿಷಮರ್ದಿನಿ ದೇವಸ್ಥಾನ, ಜೂ.28ರಂದು ಬೆಳಗ್ಗೆ 9ರಿಂದ ಸಂಜೆ 9ರ ವರೆಗೆ ಅಜ್ಜರಕಾಡು ಪುರಭವನ ಹಾಗೂ ಜೂ.29ರಂದು ಫಿಶರೀಸ್ ಸಭಾಭವನದಲ್ಲಿ ನಡೆಯಲಿದೆ ಎಂದ್ರು. ಸಹಜ ಯೋಗದಿಂದ ಏಕಾಗ್ರತೆ ಹಾಗೂ ಸೃಜನಶೀಲತೆ ಹೆಚ್ಚಳವಾಗಲಿದೆ. ದಿನನಿತ್ಯದ ಒತ್ತಡಗಳ ನಡುವೆ ಮನಸ್ಸು ಸ್ಥಿರವಾಗಿರಲಿದೆ. ರೋಗ ನಿರೋಧಕ ಶಕ್ತಿ ಬಲಪಡಿಸುವ ಜತೆಗೆ ಶಾಂತಿ ಹಾಗೂ ಸಂತೋಷದ ಅನುಭವ ನೀಡುತ್ತದೆ. ಸಹಾನುಭೂತಿ, ಸಹನೆ ಮತ್ತು ದೆಯಂತಹ ಗುಣಗಳನ್ನು ವೃದ್ಧಿಸುತ್ತದೆ ಎಂದಿದ್ದಾರೆ. ಇನ್ನು ಈ ಸುದ್ದಿಗೋಷ್ಠಿಯಲ್ಲಿ ಉಡುಪಿ ಸೆಂಟರ್ ಅಧ್ಯಕ್ಷ ವಿಷ್ಣುಮೂರ್ತಿ ಉಡುಪ, ಕಾರ್ಯಕರ್ತರಾದ ನವೀನ್ ಶೆಟ್ಟಿ, ಗೋವರ್ಧನ ತಿಂಗಳಾಯ, ಅಭಿಷೇಕ್ ಉಪಸ್ಥಿತರಿದ್ರು.



