ಆಮ್ ಆದ್ಮಿ ಪಕ್ಷದ ಮುಂದಿನ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತ ಅಭ್ಯರ್ಥಿಗಳೊಂದಿಗೆ ಹಾಗೂ ಪಕ್ಷದ ಪ್ರಮುಖ ನಾಯಕರೊಂದಿಗೆ ಇಂದು ಮಹತ್ವದ ಸಭೆ ನಡೆಯಿತು.

ಕ್ಷೇತ್ರದ ಪರಿಸ್ಥಿತಿ, ಜನತೆಯ ಅವಶ್ಯಕತೆಗಳು ಹಾಗೂ ಚುನಾವಣಾ ತಂತ್ರದ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ಬಲಿಷ್ಠ ಮುಂದಿನ ಹೆಜ್ಜೆಗಳಿಗಾಗಿ ರೂಪುರೇಖೆ ಬಗ್ಗೆ ಚರ್ಚಿಸಲಾಯಿತು. ಇದಕ್ಕೆ ಸೇರ್ಪಡೆಯಾಗಿ, ದಕ್ಷಿಣ ಕನ್ನಡ ಆಮ್ ಆದ್ಮಿ ಪಕ್ಷದ ವತಿಯಿಂದ ಇತ್ತೀಚೆಗೆ ಗುಜರಾತ್ ಮತ್ತು ಪಂಜಾಬ್ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದನ್ನು ಸಂಭ್ರಮಿಸಿ ವಿಜಯೋತ್ಸವವನ್ನು ಮಂಗಳೂರು ಸೋಜಾ ಆರ್ಕೆಡ್‌ನಲ್ಲಿರುವ ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು.



