ಸಮಾಜದಲ್ಲಿ ಮಂಗಳಮುಖಿಯರೆಂದರೆ ತಾತ್ಸಾರದಿಂದ ಕಾಣುವವರೇ ಹೆಚ್ಚು. ಹಾಗಾಗಿ ಅವರು ಪ್ರತಿ ಹೆಜ್ಜೆಯಲ್ಲಿಯೂ ಅವಮಾನ ಅನುಭವಿಸುತ್ತಿದ್ದಾರೆ.

ಇದೇ ರೀತಿ ಮನೆಗೆ ಹೋಗಲು ರಿಕ್ಷಾದವರು ತನ್ನನ್ನು ಹತ್ತಿಸಿಕೊಳ್ಳಲಿಲ್ಲ ಎಂದು ಅವಮಾನಗೊಂಡ ಮಂಗಳಮುಖಿಯೊಬ್ಬರು ನಾಲ್ಕು ರಿಕ್ಷಾ ಖರೀದಿಸಿ ಬಾಡಿಗೆಗೆ ನೀಡುತ್ತಿದ್ದಾರೆ. ಅನಿ ಮಂಗಳೂರು ಎಂಬ ಸ್ವಾಭಿಮಾನದ ಮಂಗಳಮುಖಿ ಮೂಲತಃ ರಾಯಚೂರಿನವರು. ಮಂಗಳೂರಿನಲ್ಲಿ ವಿದ್ಯಾಭ್ಯಾಸಕ್ಕೆ ಬಂದ ಇವರು ಇದೀಗ ಇಲ್ಲಿಯೇ ನೆಲೆ ನಿಂತಿದ್ದಾರೆ. ಬಿಎ ಬಳಿಕ ಬಿಎಡ್ ಎರಡು ಸೆಮಿಸ್ಟರ್ ಬರೆದ ಇವರು ಮಂಗಳಮುಖಿಯರಿಗೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಲು ಕಷ್ಟ ಎಂದು ಅರಿತು ಶಿಕ್ಷಣವನ್ನು ಮೊಟಕುಗೊಳಿಸಿದ್ರು. ಜೀವನದಲ್ಲಿ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದಾರೆ. ಈ ಅವಮಾನಗಳೇ ರಿಕ್ಷಾ ಖರೀದಿಗೆ ಪ್ರೇರಣೆಯಾಗಿದೆ ಎಂದಿದ್ದಾರೆ ಅನಿ ಮಂಗಳೂರು.



