ಜನ ಮನದ ನಾಡಿ ಮಿಡಿತ

Advertisement

ಹುಣಸೂರು: ನಿಲುವಾಗಿಲು ಗ್ರಾಮದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತ!!???

ನಿಲುವಾಗಿಲು ಗ್ರಾಮದಲ್ಲಿ ಡಿಪ್ಲೊಮಾ, ಪಿ.ಯು ಕಾಲೇಜು ಸ್ಥಾಪಿಸುವ ಪ್ರದೇಶ ಹಾಗೂ ದೇವಸ್ಥಾನ ಇರುವ ಪ್ರದೇಶದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಸತ್ಯ ಎಂ.ಎ ಎಸ್ ಫೌಂಡೇಶನ್ ಹಾಗೂ ನಿಲುವಾಗಿಲು ಗ್ರಾಮಸ್ಥರೊಂದಿಗೆ ಹುಣಸೂರು ಉಪವಿಭಾಗಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸತ್ಯ ಎಂ.ಎ.ಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ರವರು ಮಾತನಾಡಿ ನಿಲುವಾಗಿಲು ಗ್ರಾಮದಲ್ಲಿ ಈಗಾಗಲೇ ಡಿಪ್ಲೋಮಾ ಕಾಲೇಜು ಹಾಗೂ ಪಿ.ಯು. ಕಾಲೇಜಿನ ಸ್ಥಾಪನೆಗೆ ಸರ್ಕಾರದಿಂದ ಅನುಮೋದನೆಯಾಗಿ ಸ್ಥಾಪನೆಯಾಗಲಿದ್ದು, ಹಾಗೂ ದೇವಸ್ಥಾನದ ಪಕ್ಕದಲ್ಲೇ ಬಾರ್ ಅಂಡ್ ರೆಸ್ಟೋರೆಂಟ್ ಸ್ಥಾಪನೆಗೆ ತಟ್ಟೆಕೆರೆ ಗ್ರಾಮ ಪಂಚಾಯಿತಿಯಿ0ದ ಅನುಮತಿ ಕೋರಲಾಗಿದ್ದು, ಈ ಬಾರ್ ಅಂಡ್ ರೆಸ್ಟೋರೆಂಟ್ ಸ್ಥಾಪನೆಯಿಂದ ಗ್ರಾಮದಲ್ಲಿ ನೆಲೆಸಿರುವ ಶಾಂತಿ ಹಾಗೂ ಸುವ್ಯವಸ್ಥೆಗೆ ಧಕ್ಕೆಯಾಗಲಿದೆ. ಈ ಬಾರ್ ಅಂಡ್ ರೆಸ್ಟೋರೆಂಟ್‌ನ್ನು ಹೆಚ್.ಎ. ಆದಿನಾರಾಯಣಶೆಟ್ಟಿ ಸಾಯಿ ಬ್ರಹ್ಮಗುರು ಕನ್ವೆನ್ಷನ್ ಹಾಲ್ ಪಕ್ಕದಲ್ಲೇ ನಿರ್ಮಿಸಲಾಗುತ್ತಿದೆ. ಈ ಛತ್ರದಲ್ಲಿ ಮದುವೆ, ಧಾರ್ಮಿಕ ಕಾರ್ಯಕ್ರಮಗಳು, ಮಕ್ಕಳ ಉಪನಯನ ಇತ್ಯಾದಿ ಶುಭ ಸಮಾರಂಭಗಳು ನಿಯಮಿತವಾಗಿ ನಡೆಯುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಸ್ಥಳೀಕರಲ್ಲದೇ ನೆರೆಹೊರೆಯ ಗ್ರಾಮಗಳಿಂದ ಜಿಲ್ಲೆಗಳಿಂದ ಜನರು ಆಗಮಿಸಲಿದ್ದು, ಈ ಪ್ರದೇಶದಲ್ಲಿ ಬಾರ್ ನಿರ್ಮಾಣವಾದರೆ ಮದ್ಯಪಾನ ಮಾಡಿದ ವ್ಯಕ್ತಿಗಳಿಂದ ಇಲ್ಲಿ ಗಲಾಟೆ, ಅಸಭ್ಯವರ್ತನೆ, ಸಾರ್ವಜನಿಕ ಅಶಾಂತಿ ಹಾಗೂ ಭದ್ರತೆಗೆ ತೀವ್ರ ಧಕ್ಕೆಯಾಗುವ ಸಂಭವವಿರುತ್ತದೆ. ನಿಲುವಾಗಿಲು ಗ್ರಾಮದಲ್ಲಿ ಈ ಬಾರ್ ನಿರ್ಮಾಣ ಮಾಡಲು ಅನುಮತಿ ನೀಡಿರುವ ಕೇವಲ 100 ಮೀ. ಅಂತರದಲ್ಲಿ ಡಿಪ್ಲೋಮಾ ಕಾಲೇಜು, ಪಿ.ಯು ಕಾಲೇಜು ನಿರ್ಮಾಣಕ್ಕಾಗಿ ಸರ್ಕಾರದಿಂದ ಅನುಮೋದನೆಯಾಗಿ ಕಾಲೇಜು ನಿರ್ಮಾಣಗೊಳ್ಳಲಿದ್ದು, ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಲಿದೆ. ಈ ಬಾರ್ ಅಂಡ್ ರೆಸ್ಟೋರೆಂಟ್ ನಿರ್ಮಾಣದಿಂದ ನಿಲುವಾಗಿಲು ಗ್ರಾಮದಲ್ಲಿ ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಒಂಟಿಯಾಗಿ ತಿರುಗಾಡಲು ಭಯದ ವಾತಾವರಣ ನಿರ್ಮಾಣವಾಗುತ್ತದೆ. ಉದ್ದೇಶಿತ ಬಾರ್ ಪಕ್ಕದಲ್ಲೇ ಶನಿವಾರಸ್ವಾಮಿ ದೇವಾಲಯವು ಇದ್ದು, ಪವಿತ್ರ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯುವ ಸ್ಥಳವಾಗಿದ್ದು, ಬಾರ್ ನಿರ್ಮಾಣವಾದರೆ ದೇವಾಲಯಕ್ಕೆ ಬರುವ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಲಿದೆ. ಬಾರ್ ಅಂಡ್ ರೆಸ್ಟೋರೆಂಟ್ ನಿರ್ಮಾಣವಾಗಲಿರುವ ಪ್ರದೇಶವು ಮುಖ್ಯರಸ್ತೆಯ ಪಕ್ಕದಲ್ಲಿದ್ದು, ಹೆಚ್ಚಿನ ವಾಹನ ಸಂಚಾರ ದಟ್ಟಣೆ, ಟ್ರಾಫಿಕ್ ಜಾಮ್ ನಡೆದು ಅನುಚಿತ ವರ್ತನೆ ಹಾಗೂ ಅಪರಾಧ ಚಟುವಟಿಕೆಗಳ ತಾಣವಾಗಲಿದೆ. ತಟ್ಟೆಕೆರೆ ಗ್ರಾಮ ಪಂಚಾಯ್ತಿಯಿ0ದ ಅನುಮತಿ ಪಡೆಯಲು ಉದ್ದೇಶಿಸಿರುವ ಬಾರ್ ಅಂಡ್ ರೆಸ್ಟೋರೆಂಟ್ ನಿರ್ಮಾಣವಾದರೆ ನಿಲುವಾಗಿಲು ಗ್ರಾಮವಲ್ಲದೆ ಸುತ್ತಮುತ್ತಲಿನ ಗ್ರಾಮಗಳಿಗೂ ಮಧ್ಯಪಾನ ಸಂಸ್ಕೃತಿ ಆವರಿಸಿ ಗ್ರಾಮದ ಶಾಂತಿ ನೆಮ್ಮದಿಗೆ ಭಂಗವಾಗಲಿದೆ. ನಿಲುವಾಗಿಲು ಗ್ರಾಮವು ಸುಂದರ ಪ್ರಕೃತಿಯಿಂದ ಕೂಡಿದ್ದು, ಇಲ್ಲಿನ ಗ್ರಾಮಸ್ಥರು ನಿಸರ್ಗಪ್ರಿಯರಾಗಿದ್ದು, ಈ ಬಾರ್ ಸ್ಥಾಪನೆಯಿಂದ ನಿಲುವಾಗಿಲು ಗ್ರಾಮದಲ್ಲಿ ಅಶಾಂತಿ ನೆಲೆಸುವ ವಾತಾವರಣ ನಿರ್ಮಾಣವಾಗಲಿದೆ. ಆದ್ದರಿಂದ ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಪರಿಗಣಿಸಿ ಉದ್ದೇಶಿತ ಬಾರ್ ಅಂಡ್ ರೆಸ್ಟೋರೆಂಟ್ ಸ್ಥಾಪನೆಗೆ ಗ್ರಾಮಸ್ಥರಗಳ ತೀವ್ರ ವಿರೋಧವಿದ್ದು, ಇದಕ್ಕೆ ಅನುಮತಿ ನೀಡಬಾರದೆಂದು ಇಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜೆ.ಸಿ.ಬಿ ಮಾಲೀಕರ ಸಂಘದ ಅಧ್ಯಕ್ಷರಾದ ಶ್ರೀನಿವಾಸ, ರೈತ ಸಂಘದ ಎಂ. ಕೃಷ್ಣೇಗೌಡ, ನಾಗೇಂದ್ರ ನಿವೃತ್ತ ಪೊಲೀಸ್ ಅಧಿಕಾರಿ, ಸಮಾಜ ಸೇವಕರಾದ ರಾಕೇಶ್ ರಾವ್, ನಿಲುವಾಗಿಲು ಗ್ರಾಮಸ್ಥರುಗಳಾದ ನಾಗಮ್ಮ, ಶೃತಿ, ವಿಜಯಲಕ್ಷ್ಮಿ, ರೇಣುಕಾ, ಪಾರ್ವತಿ, ಚಂದ್ರಕಲಾ, ಸುಲೋಚನ ಅಡಿಗ, ನಾಗೇಂದ್ರ, ಶೇಖರ, ಹರೀಶ, ನಾಗೇಶ್, ಚೇತನ್, ಅಭಿ, ಶಶಿಧರ್ ಇನ್ನು ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!