ಗಾಗೇನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ತುಳಸಮ್ಮ ರವರವರಿಗೆ ಮಾನ್ಯ ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹೊಂಗಯ್ಯರವರು ಸನ್ಮಾನಿಸಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ದಲಿತ ಯುವ ಮುಖಂಡರು ತುಳಸಮ್ಮ ಪರವಾಗಿ ಮತನಾಡಿ ದಲಿತ ಹೆಣ್ಣು ಮಗಳು ಅದ್ಯಕ್ಷರಾಗಿ ಆಯ್ಕೆ ಆಗಿರುವುದು ನಮಗೆ ಸಂತೋಷ ತಂದಿದೆ ಕಡಿಮೆ ಅವಧಿಯಲ್ಲಿ ಅಧ್ಯಕ್ಷರಾಗಿದ್ದು. ದಯವಿಟ್ಟು ಹೆಚ್ಚಿನ ಸಲಹೆ ಸಹಕಾರ ನೀಡಿ ಗಾಗೇನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಪ್ರೋತ್ಸಾಹ ನೀಡಬೇಕು ಎಂದು ಎಲ್ಲರಲ್ಲೂ ತುಳಸಮ್ಮನ ಪರವಾಗಿ ಮನವಿ ಮಾಡಿದರು. ಈ ವೇಳೆ ಯುವ ಮುಖಂಡರಾದ ದೊಡ್ಡಹೆಜ್ಜೂರು ನಾಗೇಶ್ ಸ್ವಾಭಿಮಾನಿ ಸೇನೆಯ ತಾಲ್ಲೂಕು ಅಧ್ಯಕ್ಷ, ಸಂತೋಷ್ ಕಟ್ಟಮಳಲವಾಡಿ, ಮದು ಕೆ ಎಂ ವಾಡಿ, ವಾಸು ಉಯಿಗೌಡನಹಳ್ಳಿ, ಮಂಜಣ್ಣ ಕರಣಕುಪ್ಪೆ, ರಘು ಕೆ ಎಂ ವಾಡಿ, ತುಳಸಮ್ಮ ರವರ ಮಗ ಶಿವಕುಮಾರ್ ಹಾಜರಿದ್ದರು.



