ಹೆಂಡತಿ ಹಾಗೂ ಆಕೆಯ ಪ್ರಿಯಕರ ಕಾನ್‌ಸ್ಟೆಬಲ್‌ನ ಕಿರುಕುಳ ತಾಳಲಾರದೇ ಗಂಡ ನೇಣು ಬಿಗಿದುಕೊಂಡು ಜೀವ ಬಿಟ್ಟಿರುವ ಘಟನೆ ಹರಿಯಾಣದ ರೋಹ್ಟಕ್‌ನ ದೊಭಾ ಗ್ರಾಮದಲ್ಲಿ ನಡೆದಿದೆ.
ಜೀವ ಕಳೆದುಕೊಳ್ಳುವ ಮೊದಲು ತನ್ನ ಹೆಂಡತಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಕೆಲ ಆರೋಪಗಳನ್ನು ಮಾಡಿದ್ದಾನೆ ಎಂದು ಹೇಳಲಾಗಿದೆ. ಮಗನ್ ಎಂಬಾತ ಪ್ರಾಣ ಕಳೆದುಕೊಂಡಿರುವ ವ್ಯಕ್ತಿ. ಮಗನ್ ಮತ್ತು ದಿವ್ಯಾ ದಂಪತಿಗೆ ಒಂದು ಗಂಡು ಮಗುವಿದೆ. ಹೆಂಡತಿ ದಿವ್ಯಾ ಹಾಗೂ ಈಕೆಯ ಪ್ರಿಯಕರ ಮಹಾರಾಷ್ಟ್ರ ಮೂಲದ ಕಾನ್‌ಸ್ಟೆಬಲ್ ದೀಪಕ್ ಆರೋಪಿಗಳು ಆಗಿದ್ದಾರೆ. ಮಗನ್ ಪ್ರಾಣ ಕಳೆದುಕೊಳ್ಳುವಾಗ ಮಾಡಿದ್ದ ವಿಡಿಯೋ ವೈರಲ್ ಆದ್ಮೇಲೆ ಅವರ ಕುಟುಂಬಸ್ಥರು ಹುಡುಕಲು ಹೋದಾಗ ಅದಗಾಲೇ ಅವನ ಉಸಿರು ನಿಂತು ಹೋಗಿತ್ತು.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ತಂದೆಯ ಜೀವ ತಗೆದು ಅವರ ಆಸ್ತಿಗಳನ್ನು ಮಾರಾಟ ಮಾಡಿ, 5 ಲಕ್ಷ ರೂಪಾಯಿ ಕೊಡು ಎಂದು ಹೆಂಡತಿ ದಿವ್ಯಾ ಕಿರುಕುಳ ನೀಡಿದ್ದಳು. ಈ ದುಡ್ಡನ್ನು ತನ್ನ ಪ್ರಿಯಕರ ಪೊಲೀಸ್ ಕಾನ್‌ಸ್ಟೆಬಲ್ ಆಗಿದ್ದರಿಂದ ಲಂಚ ಕೊಟ್ಟು ಹುದ್ದೆಯಲ್ಲಿ ಬಡ್ತಿ ಪಡೆಯಲು ಯೋಜನೆ ರೂಪಿಸಿದ್ದರು. ಇಷ್ಟೇ ಅಲ್ಲದೇ, ಇಬ್ಬರು ಮುಂಬೈನಲ್ಲಿ ನೆಲೆಸಲು ಈಗಾಗಲೇ ಯೋಜನೆ ರೂಪಿಸಿದ್ದರು ಎಂದು ವಿಡಿಯೋದಲ್ಲಿ ಮಗನ್ ಆರೋಪಿಸಿದ್ದಾನೆ. ಗೋದಿ ಮಾರಾಟ ಮಾಡಿದರಿಂದ ಬಂದ ಹಣದಲ್ಲಿ ಹೆಂಡತಿಗೆ 5 ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದೇನೆ. ಜೊತೆಗೆ ನನ್ನ ಬ್ರೇಸ್‌ಲೇಟ್ ಮಾರಾಟ ಮಾಡಿ 2 ಲಕ್ಷ ರೂಪಾಯಿ ನೀಡಿದ್ದೇನೆ. ಇಷ್ಟೇಲ್ಲಾ ಕೊಟ್ಟರೂ ಇನ್ನು ಒಂದೂವರೆ ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು ಕಿರುಕುಳ ನೀಡಿದ್ದರು. ನಾನು ಹಣ ಕೊಟ್ಟಿರುವ ಬಗ್ಗೆ ಮನೆಯಲ್ಲಿ ದಾಖಲೆಗಳು ಇವೆ. ಯಾವುದೇ ಕಾರಣಕ್ಕೂ ನಾನು ನನ್ನ ತಂದೆಯ ಜೀವ ತೆಗೆಯಲು ಸಾಧ್ಯವಿಲ್ಲ. ಅದಕ್ಕಾಗಿ ನನ್ನ ಪ್ರಾಣವನ್ನೇ ತೆಗೆದುಕೊಳ್ಳುತ್ತಿದ್ದೇನೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾನೆ ಎನ್ನಲಾಗಿದೆ.
ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿ ಕಾರ್ಯಾಚರಣೆ ನಡೆಸಿ ಅರಬ್ಬಿ ಸಮುದ್ರದಲ್ಲಿ…
ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನಲ್ಲಿ ಇಂದು ಮಧ್ಯಾಹ್ನ ಕೋಕರ್ ಹೈಡ್ರೋ ಟ್ರೀಟರ್ ಘಟಕದಲ್ಲಿ ಘಟನೆ ಸಂಭವಿಸಿದ್ದು, ಘಟನಾ…
ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲು ಪ್ರದೇಶವನ್ನು ಅ.1ರ ಮಧ್ಯರಾತ್ರಿಯಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ವಿಭಾಗೀಯ…
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಲೆಗಳ ಆರಂಭದ ಸಮಯದಲ್ಲಿ ಬದಲಾವಣೆ…
ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ ಏಕ ಜಾತಿ ಧರ್ಮ ಪೀಠದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಪಂಚಾಶತ್…
ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗೆ ಅವಧಿ ಮೀರಿದ ಮಾತ್ರೆಗಳನ್ನು ವಿತರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಆಸ್ಪತ್ರೆ ಆಡಳಿತ…