ಬಾಲಿವುಡ್‌ನ ಖ್ಯಾತ ನಟಿ ಹಾಗೂ ಮಾಡೆಲ್ ಶೆಫಾಲಿ ಜರಿವಾಲಾ ಅವರು ತಡರಾತ್ರಿ ಹೃದಯ ಸ್ತಂಭನ ದಿಂದ ನಿಧನ ಹೊಂದಿದ್ದಾರೆ.
ಸದ್ಯ ಈ ಸುದ್ದಿ ತಿಳಿಯುತ್ತಿದ್ದಂತೆ ಬಾಲಿವುಡ್‌ನ ನಟ, ನಟಿಯರು ಬಿಗ್ ಶಾಕ್‌ಗೆ ಒಳಗಾಗಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ ಹುಡುಗರು ಸಿನಿಮಾದಲ್ಲಿ ಪಂಕಜಾ ಸಾಂಗಿಗೆ ಶೆಫಾಲಿ ಜರಿವಾಲಾ ಹೆಜ್ಜೆ ಹಾಕಿದ್ದರು. ಬಾಲಿವುಡ್ ನಟಿ ಶೆಫಾಲಿ ಜರಿವಾಲಾ ಅವರಿಗೆ ತಡರಾತ್ರಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಮುಂಬೈ ನಗರದ ಬೆಲ್ಲೆವ್ಯೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆದಾಗಲೇ ನಟಿಯು ಕೊನೆಯುಸಿರೆಳೆದಿದ್ದಾರೆ. ಇದರಿಂದ ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ತೀವ್ರ ದುಃಖಕ್ಕೆ ಒಳಗಾಗಿದ್ದಾರೆ.
ಎದೆ ನೋವು ಕಾಣಿಸಿದ ತಕ್ಷಣ ಶೆಫಾಲಿ ಜರಿವಾಲಾ ಅವರನ್ನು ಪತಿ ಪರಾಗ್ ತ್ಯಾಗಿ ಹಾಗೂ ಮೂವರು ವ್ಯಕ್ತಿಗಳು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೂ ಕೂಡ ನಟಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ. ಆಸ್ಪತ್ರೆಯಿಂದ ಹೊರ ಬರುವಾಗ ಪರಾಗ್ ತ್ಯಾಗಿ ಯಾವುದೇ ಪ್ರತಿಕ್ರಿಯೆಗಳನ್ನು ನೀಡದೇ ಹಾಗೇ ಹೋದರೂ ಎನ್ನಲಾಗಿದೆ. 2002ರಲ್ಲಿ ಕಾಂತ ಲಗಾ ಎನ್ನುವ ಹಾಡಿನ ಮೂಲಕ ಶೆಫಾಲಿ ಜರಿವಾಲಾ ಹೆಚ್ಚು ಪ್ರಖ್ಯಾತಿಯನ್ನು ಪಡೆದಿದ್ದರು. ಹಿಂದಿ ಬಿಗ್‌ಬಾಸ್- 13ರಲ್ಲಿ ಶೆಫಾಲಿ ಕಾಣಿಸಿಕೊಂಡಿದ್ದರು. ಶೆಫಾಲಿ ಜರಿವಾಲಾ ಹಾಗೂ ಉತ್ತರ ಪ್ರದೇಶ ಮೂಲದ ಪರಾಗ್ ತ್ಯಾಗಿ ಅವರು 2014ರಲ್ಲಿ ಮದುವೆಯಾಗಿದ್ದರು. ಇದಾದ ಮೇಲೆ ಹಲವಾರು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಪರಾಗ್ ತ್ಯಾಗಿ, ಶೆಫಾಲಿ ಜರಿವಾಲಾ ಟೆಲಿವಿಷನ್ ಹಾಗೂ ಸಿನಿಮಾ ಎರಡರಲ್ಲೂ ಕೆಲಸ ಮಾಡುತ್ತಿದ್ದರು. ಶೆಫಾಲಿ ಜರಿವಾಲಾ ಅವರು ಗುಜರಾತ್‌ನ ಅಹಮದಾಬಾದ್‌ನಲ್ಲಿ 15 ಡಿಸೆಂಬರ್ 1982 ರಂದು ಜನಿಸಿದ್ದರು. 2002ರಲ್ಲಿ ಕಾಂತ ಲಗಾ ಹಾಡಿನ ಮೂಲಕ ಹೆಸರಾಗಿದ್ದ ಶೆಫಾಲಿ, ರಾತ್ರೋರಾತ್ರಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು ಎನ್ನಲಾಗಿದೆ.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…
ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಅಯ್ಯಪ್ಪ ಮಂದಿರ ಮೊಡಂಕಾಪ್, 2025 - 26 ರ ಅಧ್ಯಕ್ಷರಾಗಿ ಸುನಿಲ್ ಎನ್…
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ನಂದರಬೆಟ್ಟು ಎಂಬಲ್ಲಿ ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಇಶಾಕ್ ಹಾಗೂ ಅಬ್ದುಲ್ಲಾ ಯಾನೆ…
ಪುತ್ತೂರಿನ ಪ್ರಕರಣ ಹಾಗೂ ಕಾರ್ಕಳದ ಅಭಿಷೇಕ್ ಆಚಾರ್ಯ ಅವರ ಆತ್ಮಹತ್ಯೆಗೆ ಸಂಬಂಧಿಸಿದ ವಿಷಯವಾಗಿ ಮಾನ್ಯ ಗ್ರಹಸಚಿವರಾದ ಶ್ರೀ ಜಿ ಪರಮೇಶ್ವರ್…