ಮೂರನೇ ಹೆಂಡತಿಯ ಜೀವ ತೆಗೆದು ನಾಪತ್ತೆ ಆಗಿದ್ದ ವ್ಯಕ್ತಿಯನ್ನು ಪೊಲೀಸರು ಕೊನೆಗೂ 23 ವರ್ಷಗಳ ಬಳಿಕ ಅರೆಸ್ಟ್ ಮಾಡಿದ್ದಾರೆ.

ಹಾಲದಾಳ ಗ್ರಾಮದ ಆರೋಪಿ ಹನುಮಂತಪ್ಪ ನನ್ನ ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಯು ತನ್ನ 3ನೇ ಹೆಂಡತಿ ರೇಣುಕಮ್ಮಳನ್ನ ಸುಳ್ಳು ಹೇಳಿ ಮದುವೆ ಆಗಿದ್ದನು. ನನಗೆ ಸರ್ಕಾರಿ ಕೆಲಸ ಇದೆ ಎಂದು ಹೆಂಡತಿಯ ಮನೆಯವರನ್ನು ನಂಬಿಸಿ ಮದುವೆಯಾಗಿದ್ದನು.

ಮದುವೆಯಾದ ಮೇಲೆ 2002ರಲ್ಲಿ ಹೆಂಡತಿಯನ್ನ ಯಾರಿಗೂ ಗೊತ್ತಾಗದ ಹಾಗೇ ಕೊಲೆ ಮಾಡಿ ಬಳಿಕ ಗೋಣಿಚೀಲದಲ್ಲಿ ಮೃತದೇಹ ಹಾಕಿ ಕಂಪ್ಲಿಗೆ ಹೋಗುತ್ತಿದ್ದ ಬಸ್‌ವೊಂದಕ್ಕೆ ಹಾಕಿದ್ದನು. ಇದಾದ ಮೇಲೆ ಆರೋಪಿಯು ಕೂಡ ನಾಪತ್ತೆ ಆಗಿದ್ದನು. ಇತ್ತೀಚೆಗೆ ಸ್ವಗ್ರಾಮ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಹಾಲದಾಳ ಗ್ರಾಮಕ್ಕೆ ಹನುಮಂತಪ್ಪ ಬಂದಿದ್ದನು. ಕೊಪ್ಪಳದ ಗಂಗಾವತಿ ಠಾಣೆಯ ಪೊಲೀಸರು 23 ವರ್ಷದ ಬಳಿಕ ಹನುಮಂತಪ್ಪನನ್ನ ಅರೆಸ್ಟ್ ಮಾಡಿದ್ದಾರೆ. ಅತ್ತ ಮಗಳನ್ನು ಕಳೆದುಕೊಂಡ ಪೋಷಕರು ಈಗಲೂ ಕಣ್ಣೀರು ಹಾಕುತ್ತಿದ್ದಾರೆ. ಈ ಹಿಂದೆ ಗಂಗಾವತಿ ನಗರದ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.



