ಜಮೀನು ವಿಚಾರದಲ್ಲಿ ಕಿರಿಕ್ ತೆಗೆದ ಕುಟುಂಬವೊಂದು ದಂಪತಿ ಮೇಲೆ ಹಲ್ಲೆ ನಡೆಸಿದ ಘಟನೆ ಬಿಳಿಕೆರೆ ವ್ಯಾಪ್ತಿಯ ಅನ್ನರಾಯಪುರ ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ಗಾಯಗೊಂಡ ಸ್ವಾಮಿನಾಯಕ ಎಂಬುವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಟ್ರ‍್ಯಾಕ್ಟರ್‌ನಲ್ಲಿ ಉಳುಮೆ ಮಾಡುವ ವಿಚಾರವಾಗಿ ಈ ಘಟನೆ ನಡೆದಿದೆ. ಹಲ್ಲೆ ನಡೆಸಿದ ಗೋಪಾಲನಾಯಕ, ಈತನ ಪತ್ನಿ ಮೀನಾಕ್ಷ ಹಾಗೂ ಸಂಬಂಧಿಕರಾದ ಚೇತನ್ ಮತ್ತು ಮಂಜು ಎಂಬುವರ ವಿರುದ್ದ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



