ಮಂಗಳೂರಿನ ಫುಟ್ ಪಾತ್ ಪಾದಚಾರಿಗಳು ನಡೆಯುವುದಕ್ಕೋ ಕಾರುಗಳ ಪಾರ್ಕಿಂಗ್ ಗೋ ಎಂದು ನಗರದ ನಾಗರಿಕರೊಬ್ಬರು ಪ್ರಶ್ನಿಸುತ್ತಿರುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಭಾರೀ ಸದ್ದು ಮಾಡುತ್ತಿದೆ.

ಫುಟ್ ಪಾತ್ ನಲ್ಲಿ ಅಡ್ಡಾಡಿದ್ದಿಯಾಗಿ ಪಾರ್ಕಿಂಗ್ ಮಾಡಿರುವ ಐಷಾರಾಮಿ ಕಾರುಗಳ ದೃಶ್ಯಾವಳಿಗಳನ್ನು ನಾಗರಿಕರು ವಿವರಣೆ ಸಹಿತ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಲು ಬಿಟ್ಟಿದ್ದಾರೆ. ಸಾಮಾನ್ಯರಿಗೆ ಒಂದು ಕಾನೂನಾದರೆ ಸಿರಿವಂತರಿಗೆ ಬೇರೆ ಕಾನೂನೇ ಎಂದು ಅವರು ಪ್ರಶ್ನೆ ಹಾಕಿದ್ದಾರೆ. ಬಸ್ಸುಗಳು ಸುಗಮವಾಗಿ ಸಂಚರಿಸಲು ಸಾಧ್ಯವಾಗದಷ್ಟು ಕಾರುಗಳ ಅಡ್ಡಾದಿಡ್ಡಿ ಪಾರ್ಕಿಂಗ್ ಬಗ್ಗೆ ಮಂಗಳೂರಿನ ಬಹುತೇಕ ಸಾಮಾನ್ಯ ಜನರ ಅಭಿಪ್ರಾಯವನ್ನು ಈ ವೀಡಿಯೋ ಪ್ರತಿಬಿಂಬಿಸುತ್ತಿದೆ.



