ಎರಡು ಖಾಸಗಿ ಬಸ್ಸ್ ಮುಖಾಮುಖಿ ಢಿಕ್ಕಿ ಹೊಡೆದ ಘಟನೆ ಸುರತ್ಕಲ್ ಮದ್ಯ ವಾಲ್ಮೀಕಿ ಶಾಲೆ ಬಳಿ ನಡೆದಿದೆ.

ನಂದನ ಹೆಸರಿನ ಬಸ್ಸ್ ಏಕಾಏಕಿ ಎದುರುಗಡೆಯಿಂದ ಬರುತ್ತಿದ್ದ ಬಸ್ಸಿನ ಮುಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಬಸ್ಸಿನ ಎದುರು ಭಾಗದ ಗ್ಲಾಸ್ ಹೊಡೆದ ಪರಿಣಾಮ ಪ್ರಯಾಣಿಕರಿಗೆ ಅಲ್ಪ ಸ್ವಲ್ಪ ಗಾಯಗಳಾಗಿವೆ. ಇನ್ನು ಈ ಭಯಾನಕ ಅಪಘಾತದ ದೃಶ್ಯ ಬಸ್ಸಿನ ಮುಂಭಾಗವಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.



