ಜನ ಮನದ ನಾಡಿ ಮಿಡಿತ

Advertisement

ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯರನ್ನು ಗೌರವಿಸುವ ಮೂಲಕ ರಾಷ್ಟೀಯ ವೈದ್ಯರ ದಿನಾಚರಣೆ

ಯೆನೆಪೋಯಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ, ವೈದ್ಯಕೀಯ ವೃತ್ತಿಪರರು ತ್ಯಾಗಮಯ ಸೇವೆಯಿಂದ ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಗೌರವಿಸುವ ಮೂಲಕ ರಾಷ್ಟ್ರೀಯ ವೈದ್ಯರ ದಿನ 2025 ಆಚರಿಸಲಾಯಿತು. ತಮ್ಮ ಅದ್ವಿತೀಯ ಸೇವೆಯಿಂದ ಹೆಸರಾಗಿರುವ ಡಾ. ಅಬುಸಾಲಿ ಎ.ಪಿ, ಡಾ. ಸಿ.ಪಿ. ಅಬ್ದುಲ್ ರಹ್ಮಾನ್ ಮತ್ತು ಡಾ. ಪಿ.ಎಸ್.ಎಂ. ಆಮೀರ್ ಅಲಿ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮವು ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ದ ವಿದ್ಯಾರ್ಥಿ ಶ್ರೀ ರುಬೈಬ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಬಳಿಕ ಯೆನೆಪೋಯಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಉಪ ವ್ಯವಸ್ಥಾಪಕ ಶ್ರೀ ನೆಲ್ವಿನ್ ನೆಲ್ಸನ್ ಅವರು ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳನ್ನು ಸ್ವಾಗತಿಸಿ, ಗೌರವಾನ್ವಿತ ಅತಿಥಿಗಳನ್ನು ಪರಿಚಯಿಸಿದರು. ದಿಗ್ಸೂಚಿ ಭಾಷಣದಲ್ಲಿ ಡಾ. ನಾಗರಾಜ ಶೆಟ್, ಸಹಾಯಕ ವೈದ್ಯಕೀಯ ಅಧೀಕ್ಷರು, ಯೆನೆಪೋಯಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಯಶಸ್ಸಿನಲ್ಲಿ ವೈದ್ಯರು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿರುತ್ತಾರೆ ಎಂದು ಒತ್ತಿ ಹೇಳಿದರು. ಕಳೆದ ವರ್ಷ ಆಸ್ಪತ್ರೆಯಲ್ಲಿ 15,000 ಕ್ಕೂ ಹೆಚ್ಚು ರೋಗಿಗಳಿಗೆ ವಿವಿಧ ಸರ್ಕಾರ ಮತ್ತು ಅರೆಸರ್ಕಾರಿ ಯೋಜನೆಗಳಡಿಯಲ್ಲಿ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ ಎಂದು ಅವರು ತಿಳಿಸಿದರು. “ನಮ್ಮ ಆಸ್ಪತ್ರೆಯಲ್ಲಿ ತಂತ್ರಜ್ಞಾನಪೂರ್ಣ, ಉನ್ನತ ಗುಣಮಟ್ಟದ ಚಿಕಿತ್ಸೆಯನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಪೂರೈಸುವುದರ ಹಿಂದಿನ ಶಕ್ತಿ ನಮ್ಮ ವೈದ್ಯರೆ ಆಗಿದ್ದಾರೆ,” ಎಂದು ಅವರು ಹೇಳಿದರು. “ಕರ್ನಾಟಕ ಮಾತ್ರವಲ್ಲದೆ ಇತರ ರಾಜ್ಯಗಳಲ್ಲಿಯೂ ನಮ್ಮ ಸೇವೆ ಗುರುತಿಸಲ್ಪಟ್ಟಿದೆ. ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ ರಾಷ್ಟ್ರಮಟ್ಟದಲ್ಲಿ ಪರಿಚಯ ಪಡೆಯುವ ಗುರಿಯೊಂದಿಗೆ ನಾವು ಮುಂದುವರಿಯುತ್ತಿದ್ದೇವೆ” ಎಂದರು.

ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಉಪಕುಲಪತಿ ಡಾ. ಎಂ. ವಿಜಯಕುಮಾರ್ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಡಾ. ಹಬೀಬ್ ರಹಮಾನ್ ಎ.ಎ., ವೈದ್ಯಕೀಯ ಅಧೀಕ್ಷರು, ಯೆನೆಪೋಯಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಅಧ್ಯಕ್ಷತೆ ವಹಿಸಿದ್ದರು. ಗೌರವಾನ್ವಿತ ಅತಿಥಿಗಳಾಗಿ ಡಾ. ಕೆ.ಎಸ್. ಗಂಗಾಧರ ಸೋಮಯಾಜಿ, ರಿಜಿಸ್ಟ್ರಾರ್ ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಉಪಕುಲಪತಿ ಡಾ. ಎಂ. ವಿಜಯಕುಮಾರ್ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ, ಡಾ. ಎಂ.ಎಸ್. ಮೂಸಬ್ಬ, ಪ್ರಾಂಶುಪಾಲರು ಯೆನೆಪೋಯಾ ವೈದ್ಯಕೀಯ ಕಾಲೇಜು ಮತ್ತು ಗೌರವಿತ ವೈದ್ಯರಾದ ಡಾ. ಅಬುಸಾಲಿ ಎ.ಪಿ, ಹಾಗೂ ಡಾ. ಸಿ.ಪಿ. ಅಬ್ದುಲ್ ರಹ್ಮಾನ್, ಪಾಲ್ಗೊಂಡಿದ್ದರು. ಡಾ. ವಿಜಯಕುಮಾರ್ ಅವರು ಮಾತನಾಡುತ್ತಾ ವೈದ್ಯರಾಗಿರುವ ಆತ್ಮಗೌರವವನ್ನು ಹಂಚಿಕೊಂಡರು. ಅವರು ವೈದ್ಯಕೀಯ ವೃತ್ತಿಯಲ್ಲಿರುವವರ ಮಾನಸಿಕ ಆರೋಗ್ಯದ ಮಹತ್ವವನ್ನು ಒತ್ತಿಹೇಳಿ, ತಮ್ಮ ಕೆಲಸದಲ್ಲಿ ಸಂತೋಷ ಮತ್ತು ತೃಪ್ತಿ ಪಡುವಂತೆ ಉತ್ತೇಜಿಸಿದರು. ಸರಿಯಾದದ್ದನ್ನು ಮಾಡಿ ಇದು ಹಲವರಲ್ಲಿ ಆಶ್ಚರ್ಯ ಹುಟ್ಟಿಸುತ್ತದೆ, ಇತರರಿಗೆ ಪ್ರೇರಣೆಯಾಗಿ ಪರಿಣಮಿಸುತ್ತದೆ. ಎಂದರು ಡಾ. ಎಂ.ಎಸ್. ಮೂಸಬ್ಬ ಅವರು ಭಾರತದ ಹೆಮ್ಮೆಯ ವೈದ್ಯ ಡಾ. ಬಿಧಾನ್ ಚಂದ್ರ ರಾಯ್ ಅವರ ನೆನಪನ್ನು ಶ್ರದ್ಧಾಪೂರ್ವಕವಾಗಿ ತಂದು, ಅವರ ಗೌರವಾರ್ಥ ಈ ದಿನವನ್ನು ಆಚರಿಸಲಾಗುತ್ತಿದೆ ಎಂದರು. ಅವರು ವೈದ್ಯರ ಮೇಲೆ ಬರುವ ಕೆಲಸದ ಒತ್ತಡವನ್ನು ಸಮರ್ಥ ನಿಯೋಜನೆ, ಸಹಕಾರ, ಜವಾಬ್ದಾರಿ ಹಂಚಿಕೆ ಮೂಲಕ ತಡೆಗಟ್ಟಬೇಕೆಂದು ಸಲಹೆ ನೀಡಿದರು. ರೆಫರಲ್ ವ್ಯವಸ್ಥೆಗಳು ಮತ್ತು ಸಾಮಾಜಿಕ ಭದ್ರತಾ ಯೋಜನೆಗಳು ಒಬ್ಬೊಬ್ಬ ವೈದ್ಯರ ಮೇಲಿನ ಹೊರೆ ಇಳಿಸಲು ಸಹಾಯ ಮಾಡುತ್ತವೆ ಎಂದು ಹೇಳಿದರು. ಡಾ. ಅಬುಸಾಲಿ ಎ.ಪಿ ಮತ್ತು ಡಾ. ಸಿ.ಪಿ. ಅಬ್ದುಲ್ ರಹ್ಮಾನ್ ಅವರನ್ನು ಅವರ ದೀರ್ಘಕಾಲದ ನಿಷ್ಠಾವಂತ ಸೇವೆಗಾಗಿ ಗೌರವಿಸಲಾಯಿತು.

“ಸಹಾನುಭೂತಿಯೊಂದಿಗೆ ಸೇವೆ: ಪ್ರಾಪ್ಯವಾದ ಆರೋಗ್ಯ ಸೇವೆಗಳು ವೈದ್ಯರ ಉದ್ಯೋಗ ತೃಪ್ತಿಗೆ ಹೇಗೆ ಪ್ರಭಾವ ಬೀರುತ್ತವೆ” ಎಂಬ ವಿಷಯದ ಮೇಲೆ ಆಯೋಜಿಸಲಾದ ಲೇಖನ ಸ್ಪರ್ಧೆಯಲ್ಲಿ ವಿಜೇತರಾದ ಡಾ. ಚಾಂದ್ನಿ ಎಸ್, ಡಾ. ಉಮಾ ಕುಲಕರ್ಣಿ ಮತ್ತು ಡಾ. ಸೌರಭಾ ಭಟ್ ಅವರನ್ನು ಗೌರವಿಸಲಾಯಿತು. ಈ ಸ್ಪರ್ಧೆಗೆ ತೀರ್ಪು ನೀಡಿದ ತಜ್ಞರಿಗೂ ಸ್ಮರಣಿಕೆಯನ್ನು ನೀಡಲಾಯಿತು. ಡಾ. ಹಬೀಬ್ ರಹಮಾನ್ ಅವರು ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣದಲ್ಲಿ ಆಸ್ಪತ್ರೆಯಲ್ಲಿ ಅತ್ಯುತ್ತಮ ಸೇವೆ ನೀಡುತ್ತಿರುವ ಎಲ್ಲಾ ವೈದ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಅವರ ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಮೇಲಿನ ಕಾಳಜಿಯ ಅಗತ್ಯವನ್ನು ಮಹತ್ವವನ್ನು ಒತ್ತಿಹೇಳಿದರು. ವೈದ್ಯರನ್ನು ಬಹುತೇಕ ಜನ ದೇವರಂತೆ ನೋಡುತ್ತಾರೆ. ಆದರೆ ಅವರು ಸಹ ಮಾನವರೆಂಬ ವಿಷಯವನ್ನು ಮರೆಯಬಾರದು ಎಂದು ಹೇಳಿದರು. ಹಿರಿಯ ವೈದ್ಯರು ತಮ್ಮ ಜೂನಿಯರ್‌ಗಳಿಗೆ ಆರೋಗ್ಯಕರ ಮತ್ತು ಸುರಕ್ಷಿತ ಕೆಲಸದ ಪರಿಸರ ಕಲ್ಪಿಸಬೇಕು ಎಂದು ಸಲಹೆ ನೀಡಿದರು. ಡಾ. ಮುಕ್ತಾರ್ ಅಬ್ದುಲ್ಲಾ, ಸಹಾಯಕ ವೈದ್ಯಕೀಯ ಅಧೀಕ್ಷರು ಮತ್ತು ಎನಸ್ಥೀಷಿಯಾ ವಿಭಾಗದ ಸೀನಿಯರ್ ರೆಸಿಡೆಂಟ್, ಧನ್ಯವಾದಾರ್ಥ ಭಾಷಣವನ್ನು ನೀಡಿದರು. ಕಾರ್ಯಕ್ರಮದಲ್ಲಿ ಡಾ. ಬಿ.ಟಿ. ನಂದೀಶ್ (ಪರೀಕ್ಷೆಗಳ ನಿಯಂತ್ರಕರು), ಡಾ. ಪ್ರಕಾಶ್ ಸಲ್ದಾನ್ಹಾ (ಉಪಪ್ರಾಂಶುಪಾಲರು), ಡಾ. ಮಾಜಿ ಜೋಸ್ (ವಿದ್ಯಾರ್ಥಿ ವ್ಯವಹಾರಗಳ ಡೀನ್), ಯೆನ್ ಮಿತ್ರರು ಮತ್ತು ಯೆನ್ ಸಹ್ಯೋಗ್ ಪಾರ್ಟ್ನರ್‌ಗಳು, ವಿವಿಧ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ನರ್ಸಿಂಗ್ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

error: Content is protected !!