ಹಾಸನ ಜಿಲ್ಲೆಯಲ್ಲಿ ಪುಂಡರ ಹಾವಳಿ ಮಿತಿಮೀರಿದೆ. ಚಲಿಸುತ್ತಿದ್ದ ಕಾರು ಅಡ್ಡಗಟ್ಟಿ ಗ್ಲಾಸ್ ಹೊಡೆದು ಪುಂಡರು ಬೆದರಿಕೆ ಹಾಕಿದ ಘಟನೆ ಹಾಸನ ನಗರದ ಸರಸ್ವತಿ ಪುರಂನಲ್ಲಿ ಮುಂಜಾನೆ ನಡೆದಿದೆ.

ಅಡ್ಲಿಮನೆಯಿಂದ ಕಾರಿನಲ್ಲಿ ಎಂ.ಜಿ.ರಸ್ತೆಗೆ ಪಿಕಪ್ ಮಾಡಲು ತೆರಳುತ್ತಿದ್ದ ಪುನೀತ್ ಮೇಲೆ ಬೈಕ್‌ನಲ್ಲಿ ಬಂದ ಮೂವರು ಪುಂಡರು ಹಲ್ಲೆ ಮಾಡಲು ಮುಂದಾಗಿದ್ದಾರೆ. ಗಾಬರಿಯಿಂದ ಸ್ವಲ್ಪ ದೂರ ಕಾರು ಚಲಾಯಿಸಿಕೊಂಡು ಪುನೀತ್ ಹೋಗಿದ್ದಾನೆ. ಬಳಿಕ ಆತನನ್ನು ಈ ಪುಂಡರು ಬೈಕಿನಲ್ಲಿ ಹಿಂಬಾಲಿಸಿಕೊಂಡು ಹೋದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.



