ಪುತ್ತೂರಿನ ಬಿಜೆಪಿ ಪಕ್ಷದ ನಗರಸಭಾ ಸದಸ್ಯರಾದ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ರಾವ್ ಯುವತಿಯೊಬ್ಬಳನ್ನು ಪ್ರೀತಿಸಿ ಗರ್ಭವತಿಯನ್ನಾಗಿಸಿ ಎಸ್ಕೇಪ್ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದೆ.

ಈ ವೇಳೆ ಜಿಲ್ಲಾಧ್ಯಕ್ಷರಾದ ಎಂ ದಿವಾಕರ್ ರಾವ್ ಮಾತನಾಡಿ, ಹಿಂದೂ ಪರ ಸಂಘಟನೆಗಳು ಆ ಹೆಣ್ಣು ಮಗುವಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕು. ಸರಕಾರ ಕೂಡ ಆ ಸಂತ್ರಸ್ತೆಗೆ ನ್ಯಾಯವನ್ನು ಕೊಡಿಸುವ ಪ್ರಯತ್ನ ಮಾಡಬೇಕು. ಪ್ರೀತಿಯ ನಾಟಕವಾಡಿ ಯುವತಿಗೆ ಮೋಸ ಮಾಡಿದ ಕೃಷ್ಣ ರಾವ್ ಸಂತ್ರಸ್ತ ಯುವತಿಯ ಬೇಡಿಕೆಯಂತೆ ಆಕೆಯನ್ನು ಮದುವೆಯಾಗಿ ಪತ್ನಿಯಾಗಿ ಒಪ್ಪಿಕೊಳ್ಳಬೇಕು. ಪುತ್ತೂರಿನ ಶಾಸಕರು ಈ ಮದುವೆಯ ಜವಾಬ್ದಾರಿಯನ್ನು ವಹಿಸಬೇಕು. ಇದು ಈಡೇರದಿದ್ದರೆ ಜಗನ್ನಿವಾಸ್ ರಾವ್ ಮನೆಯ ಮುಂದೆ ಅನಿರ್ದಿಷ್ಟಾವಧಿ ಧರಣಿಯನ್ನು ವೆಲ್ಫೇರ್ ಪಾರ್ಟಿ ಆಯೋಜಿಸಲಿದೆ ಎಂದು ಖಡಕ್ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಇನ್ನು ಈ ಸುದ್ದಿಗೋಷ್ಠಿಯಲ್ಲಿ ವೆಲ್ಫೇರ್ ಪಾರ್ಟಿ ದಕ್ಷಿಣ ಕನ್ನಡ ಇದರ ರಾಜ್ಯ ಉಪಾಧ್ಯಕ್ಷರಾದ ಶ್ರೀಕಾಂತ್ ಸಾಲ್ಯಾನ್, ಸಾಮಾಜಿಕ ಹೋರಾಟಗಾರರಾದ ಪ್ರೇಮ, ನಿರ್ಮಲಾ ಉಪಸ್ಥಿತರಿದ್ರು.



